ಮಡಿಕೇರಿ : ಸ್ಕೈಗೋಲ್ಡ್ ಮಳಿಗೆ ಉದ್ಘಾಟನೆ
Update: 2017-12-21 19:36 IST
ಮಡಿಕೇರಿ,ಡಿ.21:ಮಡಿಕೇರಿ ನಗರದ ಮಹದೇವಪೇಟೆ ರಸ್ತೆಯಲ್ಲಿ ಚಿನ್ನಾಭರಣಗಳ ಮಳಿಗೆ ಸ್ಕೈಗೋಲ್ಡ್ ಘಟಕ ಉದ್ಘಾಟನೆಗೊಂಡಿದೆ. ರಾಜ್ಯ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷರಾದ ಚುಮ್ಮಿದೇವಯ್ಯ, ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್, ನಗರಸಭಾ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಅಮೀನ್ ಮೊಹಿಸಿನ್ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.