×
Ad

ಕಡುಬಡವರ ಏಳ್ಗೆಯೇ ಸರಕಾರದ ಧ್ಯೇಯ : ಕೆ.ಪಿ.ಮೋಹನ್‍ರಾಜ್

Update: 2017-12-21 20:32 IST

ತುಮಕೂರು,ಡಿ.21:ನೆಮ್ಮದಿಯ ಬದುಕನ್ನು ಕಂಡುಕೊಳ್ಳುವ ದಿಸೆಯಲ್ಲಿ ಕಡುಬಡವರು ಅಲೆಮಾರಿಗಳಾಗಿ ಅರೆ ಅಲೆಮಾರಿ ಗಳಾಗಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬೀದಿಯಲ್ಲೇ ಮಲಗುವುದು,ಊಟ-ತಿಂಡಿಗಳನ್ನು ಮಾಡುತ್ತಾ ಬದುಕುತ್ತಿರುವ ಕಡುಬಡವರ ಏಳ್ಗೆಗೆ ಕರ್ನಾಟಕ ಸರಕಾರ ಹಲವಾರು ಯೋಜನೆಗಳನ್ನು ಸ್ಥಳೀಯ ಸಂಸ್ಥೆಗಳ ವ್ತಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ತಿಳಿಸಿದ್ದಾರೆ. 

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ನಗರಾಭಿವೃದ್ಧಿ ಕೋಶ, ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಬೀದಿ ವ್ಯಾಪಾರಿಗಳ ಅಧಿನಿಯಮ 2014ರ ಕುರಿತ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇನ್ನು 15 ದಿನಗಳಲ್ಲಿ ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿಗಳಿಗೆ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಿ ಅವರಿಗೆ ನಿವೇಶನಗಳನ್ನು ಹಂಚಲಾಗುವುದೆಂದು ಜಿಲ್ಲಾಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರು ಕಾನೂನಿನಡಿಯಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ನಡೆಸುವ ಮೂಲಕ ತಮ್ಮ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. 

ಕೊಳಚೆ ಪ್ರದೇಶಗಳು ಸಮಾಜಕ್ಕೂ,ಸರಕಾರಕ್ಕೂ ಕಳಂಕವಾಗಿದ್ದು, ತುಮಕೂರು ನಗರ ಮತ್ತು ಜಿಲ್ಲೆಯನ್ನು ಕೊಳಚೆ ಪ್ರದೇಶ ಮುಕ್ತವನ್ನಾಗಿಸಲು ಎಲ್ಲ ಇಲಾಖೆಗಳು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. 

ಕಾರ್ಯಾಗಾರದಲ್ಲಿ ಡಿ.ಡಿ.ಹೆಚ್.ಟಿ. ರಾಮಚಂದ್ರಪ್ಪ ಮಾತನಾಡಿ,ಜಿಲ್ಲೆಯ ನಗರ ಪ್ರದೇಶಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಹಾಗೂ ಕಡಿಮೆ ಆದಾಯ ಹೊಂದಿರುವ ಜನರ ಸ್ಥಿತಿಗತಿಗಳು ಹಾಗೂ ಜೀವನೋಪಾಯ ಮಾರ್ಗಗಳ ಬಗ್ಗೆ ತಿಳಿಸಿದರು.

ವಕೀಲ ಜಿ.ವಿ.ವಿಶ್ವನಾಥ್ ಮಾತನಾಡಿ,ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣಾ ಅಧಿನಿಯಮ-2014 ಮತ್ತು ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣಾ ನಿಯಮಗಳು-2016 ರ ಬಗ್ಗೆ ವಿವರ ನೀಡಿದರು.

ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ವಿಜಯಲಕ್ಷ್ಮಿ ಮಾತನಾಡಿ,ಬೀದಿ ಬದಿ ವ್ಯಾಪಾರಿ ವಲಯಗಳಲ್ಲಿನ ಸಂಚಾರಿ ನಿಯಮಗಳು, ನಿಯಮಗಳನ್ನು ಪಾಲಿಸುವಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ನಲ್ಮ್ಮ ಯೋಜನೆ,ನಗರ ಜೀವನೋಪಾಯ ಯೋಜನೆಯ ಸಂಕ್ಷಿಪ್ತ ಪರಿಚಯವನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಎಲ್. ಮಂಜುನಾಥ್ ಅವರು ಬೀದಿ ಬದಿ ವ್ಯಾಪಾರಿಗಳಿಗೆ ತಿಳಿಸಿದರು. 

ಡೇ ನಲ್ಮ್ ಯೋಜನೆಯಡಿ ಸಾಧನೆ ಮಾಡಿರುವ ಜಿಲ್ಲೆಯ ಪ್ರಗತಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿವರವಾಗಿ ರಾಮಚಂದ್ರಪ್ಪ ಕಾರ್ಯಾಗಾರದಲ್ಲಿ ತಿಳಿಸಿದರು. 
ಕಾರ್ಯಾಗಾರದಲ್ಲಿ ಮೈಸೂರಿನ ಎಸ್.ಐ.ಯು.ಡಿ.ಯ ಮಂಜುನಾಥ್ ಎನ್., ತುಮಕೂರು ಜಿಲ್ಲಾ ಯೋಜನಾ ನಿರ್ದೇಶಕಿ ಅನುಪಮ ಇನ್ನೂ ಮುಂತಾದವರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News