×
Ad

ವೇಶ್ಯಾವಾಟಿಕೆ: ಸ್ಪಾ ಮಾಲಕನ ಬಂಧನ, ಯವತಿಯ ರಕ್ಷಣೆ

Update: 2017-12-21 21:30 IST

ಮೈಸೂರು,ಡಿ.21: ನಗರದ ಬೋಗಾದಿ ಬಳಿಯ ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸ್ಪಾ ಮಾಲಕನನ್ನು ಬಂಧಿಸಿ ಒಬ್ಬ ಯುವತಿಯನ್ನು ರಕ್ಷಿಸಿದ್ದಾರೆ.

ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟರಿಬ್ಬರು ಇಲ್ಲಿನ ಗಿರಾಕಿಗಳು ಎಂಬ ಆಘಾತಕಾರಿ ವಿಚಾರವೂ ಈ ಕಾರ್ಯಚರಣೆಯಿಂದ ಬಯಲಾಗಿದೆ. 
ನಗರದ ಬೋಗಾದಿ ಬಡಾವಣೆ ಬಳಿ ಮಸಾಜ್ ಕೇಂದ್ರ ನಡೆಸುತ್ತಿದ್ದ ರಾಜೇಶ್ ಬಂಧಿತ ಆರೋಪಿ ಈ ಸಂಬಂಧ ಸ್ಪಾದಲ್ಲಿದ್ದ ಪಾಂಡವಪುರ ಬಳಿಯ ಗ್ರಾಮವೊಂದರ ಯವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. 

ಸ್ಪಾ ಮಾಲೀಕ ರಾಜೇಶ್‍ನನ್ನು ಬಂಧಿಸಿದ ಸರಸ್ವತಿಪುರಂ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದಾರೆ.

ಜೀವನ ನಿರ್ವಹಣೆಗಾಗಿ ಕೆಲಸ ಹುಡುಕುತ್ತಿದ್ದ ನನಗೆ ಮಹಿಳೆಯೊಬ್ಬಳು ಪರಿಚಯವಾಗಿ ಈ ಜಾಲಕ್ಕೆ ದೂಡಿದಳು ಎಂದು ಯುವತಿ ನೀಡಿದ ಹೇಳಿಕೆ ಮೇರೆಗೆ ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದಾರೆ.

ಚಿತ್ರನಟರು ಬರುತ್ತಿದ್ದರು: ವಿಚಾರಣೆ ವೇಳೆ ಕನ್ನಡ ಚಿತ್ರರಂಗದ ಇಬ್ಬರು ಪ್ರಸಿದ್ಧ ಹಾಸ್ಯನಟರು ಇಲ್ಲಿಗೆ ಬರುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಯುವತಿ ಹೊರಹಾಕಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News