×
Ad

ಕೊಳ್ಳೇಗಾಲ;ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Update: 2017-12-22 17:04 IST

ಕೊಳ್ಳೇಗಾಲ,ಡಿ.22: ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ನಡೆಸಿದ ಆರೋಪಿಗಳನ್ನು ಗಲ್ಲಿಗೆರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಬಸ್‍ನಿಲ್ದಾಣದಿಂದ ಹೊರಟ ಪ್ರತಿಭಟನೆ ಮೆರವಣಿಗೆಯು ಸ್ಟೇಟ್‍ಬ್ಯಾಂಕ್ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಮೂಲಕ ನೂರಾರು ವಿದ್ಯಾರ್ಥಿಗಳ ಜೊತೆಯಲ್ಲಿ ವಿವಿಧ ಸಂಘಟನೆಗಳ ಮೆರವಣಿಗೆ ನಡೆಸಿ ನಂತರ ತಾಲೂಕು ಕಛೇರಿಯಲ್ಲಿ ಮನವಿ ಸಲ್ಲಿಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್ ಮಹೇಶ್ ಮಾತನಾಡಿ, ಪ್ರತಿನಿತ್ಯ ಹೆಣ್ಣುಮಕ್ಕಳ ಅತ್ಯಾಚಾರ ಕೊಲೆ ನಡೆಯುತ್ತಲೇ ಇದೆ. ಆದರೆ ರಾಜ್ಯದ ಕಾನೂನು ಸುವವ್ಯಸ್ಥೆ ಕೆಟ್ಟಿರುವುದ್ದರಿಂದ ಎರಡು ದಿನಕ್ಕೆ ಒಂದು ಹೆಣ್ಣು ದಲಿತ ಮಗು ಕೊಲೆಯಾಗುತ್ತಿದೆ. ಈ ಪ್ರಕರಣದ ತಪ್ಪಿಸ್ಥರನ್ನು ಬಂಧಿಸಿ ರಾಜ್ಯ ಸರ್ಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯಮುಖಂಡರಾದ ಚಂದ್ರಕಲಾಬಾಯಿ, ಜಿ.ಪಿ ಶಿವಕುಮಾರ್, ರೈತ ಮುಖಂಡರಾದ ಶೈಲೇಂದ್ರ, ಬಸವರಾಜು, ಗೌಡೇಗೌಡ, ದಿಲೀಪ್, ಭಗತ್ ಸತ್ಯ, ಶಂಕರ್, ಮಹದೇವಸ್ವಾಮಿ, ವಿವಿಧ ಸಂಘಟನೆಯ ಸೋಮಣ್ಣ ಉಪ್ಪಾರ್, ಮಹೇಶ್, ಶ್ರೀಧರ್, ಪ್ರಭು ಮುಳ್ಳೂರು, ವಿಜಯ್‍ರಾಜ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News