ಟ್ರ್ಯಾಕ್ಟರ್ ಢಿಕ್ಕಿ : ಬೈಕ್ ಸವಾರ ಸಾವು
Update: 2017-12-22 17:13 IST
ಶಿವಮೊಗ್ಗ, ಡಿ. 22: ವೇಗವಾಗಿ ಆಗಮಿಸಿದ ಟ್ರ್ಯಾಕ್ಟರ್‍ವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಇಡಗೋಡು ಕ್ರಾಸ್ ಬಳಿ ನಡೆದಿದೆ.
ಚಗಚಿಕೊಪ್ಪ ಗ್ರಾಮದ ಸೋಮೇಶ್ ಯಂಕಪ್ಪ ಬಣಕಾರ್ (23) ಮೃತಪಟ್ಟವರೆಂದು ಗುರುತಿಸಲಾಗಿದೆ. ಕೋಟಿಪುರ ಗ್ರಾಮದ ನಿವಾಸಿ ಹಾಲೇಶನಾಯ್ಕ್ (23) ಗಾಯಗೊಂಡವರೆಂದು ಗುರುತಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.