×
Ad

ಸಂಘಪರಿವಾರದಿಂದ ಡಿ.26ಕ್ಕೆ ಮೂಡಿಗೆರೆ ಬಂದ್ ಗೆ ಕರೆ

Update: 2017-12-23 20:22 IST

ಮೂಡಿಗೆರೆ, ಡಿ. 23: ವಿಜಯಪುರದ ಶಾಲಾ ವಿದ್ಯಾರ್ಥಿನಿ ದಾನಮ್ಮ ಮೇಲೆ ನಡೆದ ಅತ್ಯಚಾರ ಕೊಲೆ ಖಂಡಿಸಿ ಬಜರಂಗದಳ ಮತ್ತು ಸಂಘಪರಿವಾರ ಸಂಘಟನೆಗಳು ಮೂಡಿಗೆರೆ ಬಂದ್‍ಗೆ ಕರೆ ನೀಡಿದೆ ಎಂದು ಬಜರಂಗದಳದ ಸಂಚಾಲಕ ಅವಿನಶ್ ತಿಳಿಸಿದ್ದಾರೆ

  ಈ ಕುರಿತು ಅವರು ಶನಿವಾರ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ. ಸರ್ಕಾರ ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಳೆದ ಕೆಲವು ವರ್ಷಗಳಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಗೃಹ ಇಲಾಖೆ ಮೂಲಕ ಸಂಘಪರಿವಾರದ ಮೆಲೆ ಕೇಸು ದಾಖಲಿಸುವಲ್ಲಿ ಕಾಲ ಕಳೆದಿದೆ.

  ರಾಜ್ಯದಲ್ಲಿ ಅನಾಚಾರಗಳು ಮಿತಿ ಮೀರಿವೆ. ಇದರಿಂದ ಅಪರಾಧಿಗಳು ವಿಜೃಂಬಿಸುತ್ತಿದ್ದು ಇದಕ್ಕೆ ಸಾಕ್ಷಿಯಾಗಿ ಬಿಜಾಪುರದಲ್ಲಿ ಶಾಲಾ ಬಾಲಕಿ ಮೇಲೆ ನಡೆದ ಅತ್ಯಚಾರ ಮತ್ತು ಕೋಲೆ ಘೋರ ಕೃತ್ಯವಾಗಿದೆ. ಇದನ್ನು ವಿರೋಧಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಅಗ್ರಹಿಸಿ ಡಿ.26 ಬುಧವಾರ ಮೂಡಿಗೆರೆ ಬಂದ್‍ಗೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News