×
Ad

ರೈತರ ಹಿತ ಕಾಯಲು ಕಾಂಗ್ರೆಸ್ ಸರಕಾರ ಸದಾ ಸಿದ್ಧ: ಮಾಜಿ ಎಮ್ಮೆಲ್ಸಿ ಗಾಯತ್ರಿ

Update: 2017-12-23 23:05 IST

 ಚಿಕ್ಕಮಗಳೂರು, ಡಿ.23: ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ರೈತರ ಹಿತ ಕಾಯಲು ಸದಾ ಸಿದ್ಧವಾಗಿದೆ ಎಂದು ಮಾಜಿ ಎಮ್ಮೆಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ ತಿಳಿಸಿದ್ದಾರೆ.

ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ರೈತರ ಸಾಲದ ಬಾದೆಯನ್ನು ತಗ್ಗಿಸಲು ಅಲೋಚಿಸಿ ಸಹಕಾರಿ ಬ್ಯಾಂಕಿನಲ್ಲಿದ್ದ ತಲಾ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದೆ. ಇಂಥದ್ದೊಂದು ಕ್ರಮ ಅನುಸರಿಸಿರುವ ಸರಕಾರವನ್ನು ರೈತಾಪಿ ವರ್ಗ ಎಂದೆಂದಿಗೂ ಮರೆಯಲಾರದು ಎಂದರು.

ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ ಮೀಗ ಮತ್ತು ರಾಜ್ಯ ಕಿಸಾನ್ ಸೆಲ್ ಸಂಚಾಲಕ ಸಿ.ಎನ್.ಅಕ್ಮಲ್. ಸಿಡಿಎ ಅಧ್ಯಕ್ಷ ಸಯದ್ ಹನೀಫ್, ರಾಜ್ಯ ಕುರಿ ಮತ್ತು ಉಣ್ಣೆ ಮಂಡಳಿ ನಿರ್ದೇಶಕ ಕೋಟೆ ಆನಂದ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕ ಅಧ್ಯಕ್ಷ ರಾಘವೇಂದ್ರ ವಹಿಸಿದ್ದರು.ಈ ಸಮಯದಲ್ಲಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಾಹಿಲ್ ಶರೀಫ್, ಎನ್‌ಎಸ್‌ಯುಐ, ಜಿಲ್ಲಾ ಅಧ್ಯಕ್ಷ ಅದಿಲ್, ಕೊಪ್ಪ ಕಿಸಾನ್ ಸೆಲ್ ಉಪಾಧ್ಯಕ್ಷ ಭರತ್, ಕಿಸಾಲ್ ಸೆಲ್ ಘಟಕ ಉಪಾಧ್ಯಕ್ಷ ಪ್ರಕಾಶ್,ಬಲರಾಂ, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News