×
Ad

ರೈತರ ಸಾಲಮನ್ನಾದ ಪ್ರಯೋಜನ ಪಡೆಯುವಂತೆ ಮಾಡಲು ಪ್ರಯತ್ನ: ಶಾಸಕ ಶಿವರಾಮ

Update: 2017-12-23 23:06 IST

ಮುಂಡಗೋಡ, ಡಿ.23: ಮುಖ್ಯಮಂತ್ರಿ ರೈತರ ಸಾಲವನ್ನು ಮನ್ನಾ ಮಾಡಿದರೆ ಮುಂಡಗೋಡಿನ 289 ರೈತರು ಹಕ್ಕು ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ಸಾಲಮನ್ನಾದಿಂದ ವಂಚಿತರಾಗುವ ಸಂಭವ ಇದೆ. ಆದರೆ ನಾವು ರೈತರ ಸಾಲಮನ್ನಾದ ಪ್ರಯೋಜನ ಪಡೆಯುವಂತೆ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ಸೊಸೈಟಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಮೃತರ ಹೆಸರಿಗೆ ಗದ್ದೆಗಳಿರುವುದರಿಂದ ಹಕ್ಕು ಬದಲಾವಣೆಯಾಗದ ಕಾರಣ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದು, ತಾಲೂಕಿನ 289 ರೈತರ ಸಾಲಮನ್ನಾಕ್ಕೆ ಸೂಕ್ರ ಕ್ರಮ ವಹಿಸಲಾಗುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡಿದರೂ ಮುಂಡಗೋಡ ತಾಲೂಕಿನ 2 89 ರೈತರು ಈ ಯೋಜನೆಯಿಂದ ವಂಚಿತವಾಗುವ ಸಾಧ್ಯತೆಯಿದೆ ಈ ರೈತರ ಗದ್ದೆಗಳು ಅವರ ತಂದೆ, ತಾಯಿ ಅಥವಾ ಗಂಡನ ಹೆಸರಿಗಿದ್ದು ಅವರು ಮೃತಪಟ್ಟಿದ್ದು ಕುಟುಂಬದವರು ವಾರಸಾ ದಾಖಲೆ ಮಾಡಿಸಿ ಭೂಮಿಯ ಆರ್‌ಟಿಸಿಯಲ್ಲಿ ಹಕ್ಕು ಬದಲಾವಣೆ ಮಾಡದೆ ಹಾಗೆ ಬಿಟ್ಟಿದ್ದು ಇದರಿಂದಾಗಿ ಸಾಲಮನ್ನಾ ಯೊಜನೆಗೆ ಒಳಪಡುತ್ತಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದಿದ್ದು ನಾಲ್ಕೈದು ದಿನಗಳಲ್ಲಿ ಈ ರೈತರಿಗೂ ಸಾಲಮನ್ನಾ ಯೊಜನೆ ಅನ್ವಯವಾಗುವಂತೆ ಕ್ರಮ ವಹಿಸಲಾಗುತ್ತಿದೆ 289 ರೈತರ 1ಕೋಟಿ 23 ಲಕ್ಷ ರೂ. ಮನ್ನಾವಾಗುತ್ತಿದೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು 319 ಇದ್ದು, ಅದರಲ್ಲಿ ಕ್ಷೇತ್ರದ ಮುಂಡಗೋಡ ತಾಲೂಕಿನ 289 ಇದ್ದು,ಇಲ್ಲಿಯ ರೈತರು ಜಾಗೃತರಾಗುವುದು ಯಾವಾಗ ಮುಖ್ಯಮಂತ್ರಿ ರೈತರ ಸಾಲವನ್ನು ಮನ್ನಾ ಮಾಡಿದರೆ ಇಲ್ಲಿಯ ರೈತರು ಜಾಗೃತರಾಗದೇ ಹಕ್ಕು ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ಸಾಲಮನ್ನಾವಾಗುವುದಿಲ್ಲ. ಆದ್ದರಿಂದ ತಕ್ಷಣ ರೈತರು ಪಹಣಿ ಪತ್ರಿಕೆಗಳಲ್ಲಿ ವಾರ್ಸಾ ದಾಖಲಾತಿಗೆ ತಹಶೀಲ್ದಾರ್ ಕಚೇರಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು.ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆರೋಗ್ಯ ಪರಿಹಾರ ಯೋಜನೆ ಚೆಕ್ ವಿತರಣೆ ಮಾಡಿದರು. ವೇದಿಕೆ ಮೇಲೆ ತಹಶೀಲ್ದಾರ್ ಅಶೋಕ ಗುರಾಣಿ, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎಸ್.ಸಂಗೂರಮಠ, ಜಿಪಂ ಅಧ್ಯಕ್ಷ ರವಿಗೌಡಾ ಪಾಟೀಲ, ಪಪಂ ಅಧ್ಯಕ್ಷ ರಫೀಕ ಇನಾಮದಾರ, ಎಚ್.ಎಂ.ನಾಯಕ್, ಕೃಷ್ಣಾ ಹಿರೇಹಳ್ಳಿ, ತಾಪಂ ಸದಸ್ಯ ಜ್ಞಾನದೇವ ಗುಡಿಯಾಳ, ಜಗದೀಶ ಕುರಬರ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News