ಮೂಡಿಗೆರೆ ಬಂದ್ ಗೆ ಅವಾಶವಿಲ್ಲ : ಪಿಎಸ್ಸೈ ರಫೀಕ್
Update: 2017-12-24 23:37 IST
ಮೂಡಿಗೆರೆ, ಡಿ.24: ವಿಜಯಪುರದಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಡಿ.25ರಂದು ಎಸ್ಸಿ,ಎಸ್ಟಿ ಹಿತರಕ್ಷಣಾ ವೇದಿಕೆ ಮತ್ತು ಡಿ.26ರಂದು ಸಂಘಪರಿವಾರ ಮೂಡಿಗೆರೆ ತಾಲೂಕು ಬಂದ್ ಕರೆನೀಡಿವೆ. ಆದರೆ ಈ ಎರಡೂ ಬಂದ್ ಗೆ ಅವಾಶವಿಲ್ಲ ಎಂದು ಎಸ್ಪಿ ಅಣ್ಣಾಮಲೈ ಆದೇಶಿಸಿರುವುದಾಗಿ ಪಿಎಸ್ಸೈ ರಫೀಕ್ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆದರೆ ಇಲ್ಲಿ ಸಂಘಟನೆಳು ಸುಮ್ಮನೆ ಬಂದ್ ಗೆ ಕರೆಗೊಡುತ್ತಿವೆ. ಇದು ಅನತ್ಯವಾಗಿದೆ. ಪ್ರತಿಭಟನೆ, ಮೆರವಣಿಗೆ ನಡೆಸಲಿ, ಬಂದ್ ನಡೆಸಲು ಅವಾಶವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಡಿ.25ರಂದು ಕ್ರಿಸ್‌ಮಸ್ ಹಬ್ಬ ಇರುವುದರಿಂದ ಬಂದ್ ಗೆ ಕರೆ ಕೊಟ್ಟರೆ ಹಬ್ಬ ಆರಿಸುವವರಿಗೆ ತೊಂದರೆಯಾಲಿದೆ. ಹೀಗಾಗಿ ಸಂಘ-ಸಂಸ್ಥೆಳು, ರಾಜಕೀಯ ಪಕ್ಷಗಳು ಬಂದ್ ಗೆ ಕರೆ ನೀಡದಂತೆ ಪ್ರಟನೆಯಲ್ಲಿ ತಿಳಿಸಿದ್ದಾರೆ.