×
Ad

“ಜನಾರೋಗ್ಯವೇ ರಾಷ್ಟ್ರ ಶಕ್ತಿ” ರಾಷ್ಟ್ರೀಯ ಆರೋಗ್ಯ ಅಭಿಯಾನ: ಪಿಎಫ್‍ಐ ಯಿಂದ ರಕ್ತದಾನ ಶಿಬಿರ

Update: 2017-12-25 17:54 IST

ಮಡಿಕೇರಿ ಡಿ.25 : ಪಾಪ್ಯುಲರ್  ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ  ಸಮಿತಿ  ವತಿಯಿಂದ  “ಜನಾರೋಗ್ಯವೇ ರಾಷ್ಟ್ರ  ಶಕ್ತಿ,  ರಾಷ್ಟ್ರೀಯ ಆರೋಗ್ಯ ಅಭಿಯಾನದ  ಅಂಗವಾಗಿ  ಮಡಿಕೇರಿಯ ಕೂರ್ಗ್‍ಕಮ್ಮುನಿಟಿ  ಹಾಲ್ ನಲ್ಲಿ ರಕ್ತದಾನ  ಶಿಬಿರ  ಹಾಗೂ  ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕೂರ್ಗ್‍ಕಮ್ಯುನಿಟಿ ಹಾಲ್ ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 60 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು.  ಪಾಪ್ಯುಲರ್ ಫ್ರಂಟ್ ನ ಜಿಲ್ಲಾಧ್ಯಕ್ಷರಾದ ಹ್ಯಾರೀಸ್, ನಗರ ಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ನೀಮಾಅರ್ಷದ್ ಹಾಗೂ ಇನ್ನಿತರರು ರಕ್ತದಾನವನ್ನು ಮಾಡಿದರು.
ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ರಕ್ತ ನಿಧಿ ಅಧಿಕಾರಿಗಳಾದ ಕರುಂಬಯ್ಯ ಅವರು ಉದ್ಘಾಟನೆ ಮಾಡಿ ರಕ್ತದಾನ ಮಾಡುವುರ ಪ್ರಯೋಜನಗಳು ಹಾಗೂ ಅದರ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.

ಪ್ರಾಸ್ತವಿಕವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಹ್ಯಾರೀಸ್ ಅವರು ಮಾತನಾಡಿ ‘ಜನಾರೋಗ್ಯವೇರಾಷ್ಟ್ರ ಶಕ್ತಿ”  ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ದೇಶಾದಾದ್ಯಂತ ಆರೋಗ್ಯ ಜಾಗೃತಿ ಸಭೆ, ಮ್ಯಾರಾಥಾನ್, ಯೋಗ ಪ್ರದರ್ಶನ ಹಾಗೂ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಆರೋಗ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದುದರಿಂದ ಶುಚಿತ್ವ ಹಾಗೂ ವೈಯುಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲ್ಪಾ ಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸುರೇಶ್, ಹಾಗೂ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರು ಹಾಗೂ ನಗರಸಭೆ ಸದಸ್ಯರು ಆದ ಅಮೀನ್ ಮೊಹಿಸಿನ್ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ನೀಮಾಅರ್ಷದ್, ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲಾಅಡ್ಕಾರ್, ಪಾಪ್ಯುಲರ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಷೀರ್ ಸ್ವಾಗತಿಸಿದರೆ, ರಿಜ್ವಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News