ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಸ್.ಎಫ್.ಐ ಪ್ರತಿಭಟನೆ

Update: 2017-12-25 14:25 GMT

ಗಂಗಾವತಿ, ಡಿ. 25: ಸಂವಿಧಾನದ ಬಗ್ಗೆ ಕೀಳು ಮಾತುಗಳನ್ನಾಡಿದ ಹಾಗೂ ಜಾತ್ಯತೀತವನ್ನು ಪ್ರತಿಪಾಧಿಸು ವವರ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ ಸಚಿವ ಅನಂತ್ ಕುಮಾರ್ ಹೆಗಡೆ ರಾಜೀನಾಮೆ ನೀಡಬೇಕೆಂದು ತಾಲೂಕ್ ಎಸ್.ಎಫ್.ಐ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಜಾತಿ ವ್ಯವಸ್ಥೆಯನ್ನು ಜಿವಂತವಾಗಿ ಇಟ್ಟುಕೊಂಡು ನಿರಂತರವಾಗಿ ಶೋಷಿತ ಸಮುದಾಯದವರನ್ನು ಶೋಷಣೆ ಮಾಡಬೇಕೆಂಬುವ ಉದ್ದೇಶ ಅನಂತ್ ಕುಮಾರ್ ಹೆಗಡೆಯವರದು. ಸರ್ವ ಜನಾಂಗದ ಶಾಂತಿಯ ತೋಟ ಎನಿಸಿರುವ ನಮ್ಮ ಭಾರತ ದೇಶದ ಪ್ರಜಾಪ್ರಭುತ್ವವನ್ನು ಒಪ್ಪಲಾರದವನು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ.  ಮತ್ತು ಭಾರತವು ಸರ್ವ ಧರ್ಮಗಳ ಸರ್ವ ಸಮುದಾಯಗಳ ದೇಶ. ಇಲ್ಲಿ  ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ,  ಜೈನ, ಸಿಖ್ಖರು ಮುಂತಾದವರು ವಾಸಿಸುತ್ತಿದ್ದಾರೆ. ದೇಶದಲ್ಲಿ ಕೋಮು ಸಾಮರಸ್ಯ ಹಾಗೂ ಸೌಹಾರ್ದತೆ ಕಾಪಾಡುವ ಸಲುವಾಗಿ ಸಂವಿಧಾನ ಭಾರತವನ್ನು ಜಾತ್ಯಾತೀತ ರಾಷ್ಟ್ರ ಎಂದು ಘೋಷಿಸಿದೆ. ಸಂವಿಧಾನದಲ್ಲಿ ಯಾವುದೇ ಧರ್ಮವನ್ನು ರಾಷ್ಟ್ರ ಧರ್ಮವಾಗಿ ಗುರುತಿಸಿಲ್ಲ. ಸರ್ಕಾರಗಳು ಯಾವುದೇ ಧರ್ಮದ ಪರ ಅಥವಾ ವಿರೋಧಿಯಾಗಬಾರದು ಎಂದು ಜಾತ್ಯತೀತ ಪದ ಹೇಳುತ್ತದೆ.  ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಹೆಗಡೆ ರಾಜೀನಾಮೆ ನೀಡಬೇಕೆಂದು ಮತ್ತು ಸ್ವಯಂ ದೂರು ದಾಖಲಿಸಬೇಕೆಂದು ಎಸ್.ಎಫ್.ಐ ಪ್ರತಿಭಟನೆ ಒತ್ತಾಯಿಸಿದೆ                 

ಈ ಸಂದರ್ಭದಲ್ಲಿ ಅಮರೇಶ ಕಡಗದ, ಗ್ಯಾನೇಶ ಕಡಗದ, ಮರಿನಾಗ ಡಗ್ಗಿಮಂಜುನಾಥ ಡಗ್ಗಿ, ವಿದ್ಯಾರ್ಥಿನಿಯರಾದ ಅಮೃತಾ, ಕವಿತಾ, ಹೊನ್ನಮ್ಮ, ಪ್ರೇಮಾ, ಅಶ್ವಿನಿ, ಅಂಬಿಕಾ, ಶಿಲ್ಪಾ, ಗಾಯಿತ್ರಿ, ಕಾವ್ಯ, ನಾಗರತ್ನ, ಯಶೋಧ, ರಾಜೇಶ್ವರಿ, ಸರಸ್ವತಿ, ರೇಖಾ, ಶಿವಮ್ಮ, ಚೈತ್ರಾ, ಸಿದ್ದಮ್ಮ, ಲಕ್ಷ್ಮಿ, ನೇತ್ರಾ, ಅಂಜಲಿ, ಕವಿತಾ ನಾಯಕ್. ಗೀತಾಂಜಲಿ ಸೇರಿ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News