ಅಗ್ನಿ ಶ್ರೀಧರ್ ವಿರುದ್ಧ ವಿಎಚ್‍ಪಿ ದೂರು

Update: 2017-12-25 16:52 GMT

ಮಂಡ್ಯ, ಡಿ. 25: ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ದೇಶದ ಬಗ್ಗೆ ಅವಹೇಳನಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಶ್ರೀಧರ್ ಅವರ ಅಗ್ನಿ ಅಸ್ತ್ರ ಡಾಟ್ ಕಾಮ್ ಅಂತರ್ಜಾಲ ತಾಣವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪೊಲೀಸ್ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿದೆ.

ವಿಎಚ್‍ಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಎಂ.ಸಿ.ವರದರಾಜು ಮತ್ತು ಶಿವಕುಮಾರ ಆರಾಧ್ಯ ನೀಡಿರುವ ದೂರಿನಲ್ಲಿ ಅಗ್ನಿ ಶ್ರೀಧರ್ ತಮ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿರುವ ಕವನವನ್ನು ಉಲ್ಲೇಖಿಸಿದ್ದು, ಇದು ಭಾರತ ಮತ್ತು ಭಾರತ ಮಾತೆಯನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ಆರೋಪಿಸಿದ್ದಾರೆ.

ಈ ಕವನದ ಮೂಲಕವಷ್ಟೇ ಅಲ್ಲದೆ ಅಗ್ನಿ ಶ್ರೀಧರ್ ಅವರು ತಮ್ಮ ಹೆಸರಿನಲ್ಲಿರುವ ಯೂಟ್ಯೂಬ್ ತಾಣದ ಮೂಲಕವೂ ದೇಶವನ್ನು ಅಗೌರವದಿಂದ ಜನರು ಕಾಣುವಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರ ನೇತೃತ್ವದ ಅಂತರ್ಜಾಲ ತಾಣ ಹಾಗೂ ಯೂ ಟ್ಯೂಬ್ ತಾಣವನ್ನು ನಿಷೇಧಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News