×
Ad

ಸೊರಬ ಅಭಿವೃದ್ಧಿಗೆ ಮಧು ಬಂಗಾರಪ್ಪ ಕೊಡುಗೆ ಶೂನ್ಯ: ಹುಲ್ತಿಕೊಪ್ಪ ಶ್ರೀಧರ್

Update: 2017-12-25 22:52 IST

ಸೊರಬ, ಡಿ.25: ಕೇವಲ ಸರಕಾರದ ಕಾರ್ಯಕ್ರಮಗಳನ್ನೇ ಉದ್ಘಾಟನೆ ಮಾಡುತ್ತಾ, ತಾಲೂಕನ್ನು ಅಭಿವೃದ್ಧಿಪಡಿಸಿದ್ದೇನೆಂದು ಬೀಗಿಕೊಳ್ಳುತ್ತಿರುವುದೇ ಶಾಸಕ ಮಧುಬಂಗಾರಪ್ಪ ಅವರ ಬಹುದೊಡ್ಡ ಸಾಧನೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹುಲ್ತಿಕೊಪ್ಪಶ್ರೀಧರ್ ಲೇವಡಿ ಮಾಡಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಶಿವಾನಂದಪ್ಪಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕೋಟಿಗಟ್ಟಲೆ ಸಾರ್ವಜನಿಕರ ಹಣದಲ್ಲಿ ಪಟ್ಟಣದಲ್ಲಿ ಸಿದ್ಧಗೊಂಡಿರುವ ಕೆಎಸ್ಶಾರ್ಟಿಸಿ ಬಸ್ ನಿಲ್ದಾಣ, ಶುದ್ಧಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡದೆ, ಆಶ್ರಯ ನಿವೇಶನಕ್ಕಾಗಿ ಹತ್ತು ಎಕರೆ ಜಮೀನು ಸರಕಾರದಿಂದ ಮಂಜೂರಾಗಿದ್ದರೂ ಈವರೆಗೂ ಆಶ್ರಯ ಸಮಿತಿಯ ಸಭೆಯನ್ನು ಕರೆಯದೆ, ಪಲಾನುಭವಿಗಳನ್ನು ಗುರುತಿಸಿ, ಹಂಚಿಕೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಸರಕಾರವಿದ್ದರೂ ಆಯಾ ತಾಲೂಕುಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗುವುದು ಸಾಮಾನ್ಯ. ಯಾವ ಮಂತ್ರಿಯನ್ನೂ ಸಂಪರ್ಕಿಸದೆ, ಸರಕಾರದ ಮೇಲೆ ಒತ್ತಡ ತರದೆ, ತಮ್ಮ ಸ್ವಂತ ಶಕ್ತಿಯಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧ್ದಿ ಪಡಿಸುವಲ್ಲಿ ವಿಫಲರಾಗಿರುವ ಶಾಸಕ ಮಧು ಬಂಗಾರಪ್ಪ,ಸರಕಾರದಿಂದ ಮಂಜೂರಾಗಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಅದನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಚಿಕ್ಕಶಕುನ ಪರಸಪ್ಪ, ಜಯಶೀಲ ಹೆಚ್ಚೆ, ಪ್ರಧಾನ ಕಾರ್ಯದರ್ಶಿ ಜಿ.ಕೆರಿಯಪ್ಪ, ಪಪಂ ಸದಸ್ಯ ಸುಜಾಯತ್‌ವುಲ್ಲಾ, ಪ್ರಮುಖರಾದ ರಾಯನ್ ಗೋಪಾಲಪ್ಪ, ಅಬ್ದುಲ್ ರಶೀದ್ ಹಿರೇಕೌಂಶಿ, ಗಜಾನನ, ಶಣ್ಮುಖ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News