×
Ad

ಸುಂಟಿಕೊಪ್ಪದಲ್ಲಿ ಕ್ರಿಸ್‌ಮಸ್ ಆಚರಣೆ: ಗೋದಲಿ ನಿರ್ಮಾಣ

Update: 2017-12-25 22:53 IST

ಸುಂಟಿಕೊಪ್ಪ, ಡಿ. 25: ವಿಶ್ವದಾದ್ಯಂತ ಆಚರಿಸುತ್ತಿರುವ ಕ್ರಿಸ್‌ಮಸ್ ಹಬ್ಬವು ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯ ಹಾಗೂ ಸಿಎಸ್‌ಐ ದೇವಾಲಯಗಳಿಂದ ಡಿಸೆಂಬರ್ ತಿಂಗಳಿನ ಮೊದಲ ವಾರದಿಂದಲೇ ಆಚರಿಸಲ್ಪಡುತ್ತಿದೆ.

ಹಬ್ಬದ ಸಿದ್ಧತೆಗಾಗಿ ರೋಮನ್ ಕೆಥೊಲಿಕ್ ಹಾಗೂ ಸಿಎಸ್‌ಐ ದೇವಾಲಯದ ವತಿಯಿಂದ ಕ್ರೈಸ್ತರ ಧರ್ಮಗುರು ಬೈಬಲ್ ಗ್ರಂಥದಲ್ಲಿ ಬರೆದಿರುವಂತೆ ಕ್ರೈಸ್ತರ ಮನೆ ಮನೆಗೆ ತೆರಳಿ ಕ್ರಿಸ್ತನ ಶುಭ ಸಂದೇಶವನ್ನು ಸಾರುವ (ಕ್ಯಾರೋಲ್ಸ್) ಕಾರ್ಯಕ್ರಮವನ್ನು ದೇವಾಲಯದ ಗಾಯನ ವೃಂದವರಿಂದ ಸಾಂತಕ್ಲಾಸ್ ವೇಷಧಾರಿಯೊಂದಿಗೆ ನಡೆಸಲಾಯಿತು.

 ಗೋದಲಿ ನಿರ್ಮಾಣ, ದೇವಾಲಯಗಳ ಅಲಂಕಾರ ನಕ್ಷತ್ರಗಳ ಅಲಂಕಾರಗಳು ಕ್ರಿಸ್‌ಮಸ್ ಸಂಕೇತವಾಗಿವೆ. ಕಳೆದ ಬಾರಿ ಸಂತ ಅಂತೋಣಿ ದೇವಾಲಯದಲ್ಲಿ ವಿವಿಧ ಸಮುದಾಯದವರು ನಕ್ಷತ್ರ ಅಲಂಕಾರ ಸ್ಪರ್ಧೆ ಏರ್ಪಡಿಸಿದ್ದರು. ಈ ಬಾರಿ ಯೇಸು ಜನಿಸಿದ ಸ್ಥಳವಾದ ಗೋದಲಿ ನಿರ್ಮಾಣ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News