ಜ್ಞ್ಞಾನ ಮೀಮಾಂಸೆಯನ್ನು ವಚನಕ್ಕೆ ಕಟ್ಟಿಕೊಟ್ಟ ಮಹಾಪುರುಷ ಅಲ್ಲಮ: ಡಾ. ಕುಂಸಿ ಉಮೇಶ್
ಚಿಕ್ಕಮಗಳೂರು, ಡಿ.25: ಜ್ಞ್ಞಾನ ಮೀಮಾಂಸೆಯನ್ನು ವಚನಕ್ಕೆ ಕಟ್ಟಿಕೊಟ್ಟ ಮಹಾಪುರುಷ ಅಲ್ಲಮ. ಜ್ಞ್ಞಾನ ಮೀಮಾಂಸೆ ಅಲ್ಲಮನಿಗೆ ದಕ್ಕಿದೆ. ಅಲ್ಲಮನನ್ನು ಅರಿ ಯುವುದು ಪ್ರಾಯೋಗದ ಕೆಲಸವಲ್ಲ ಎಂದು ಪ್ರಾಧ್ಯಾಪಕ ಡಾ. ಕುಂಸಿ ಉಮೇಶ್ ಅಭಿಪ್ರಾಯಿಸಿದ್ದಾರೆ. ಅವರು ಕ್ಯಾತನಬೀಡು ಪ್ರತಿಷ್ಠಾನ, ಅರಿವಿನ ಮನೆ ಪ್ರಕಾಶನದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬಯಲ ಅಲ್ಲಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯಿಸಿ ಮಾತನಾಡುತ್ತಿದ್ದರು. ಅಲ್ಲಮ ಜ್ಞ್ಞಾನ ಮೀಮಾಂಸೆಯನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುವ ಮೂಲಕ ಬಸವಣ್ಣ ಅರಿವಿನ ವಿಸ್ಮಯದ ವಿವೇಕವನ್ನು ಮಾಡದಿದ್ದರೆ ವಚನ ಸಾಹಿತ್ಯ ಉಳಿಯುತ್ತಿರಲಿಲ್ಲ. ಅಲ್ಲಮ ಅರ್ಥವಾಗಲ್ಲ ಎಂದು ಹಿಂದೆ ಉಳಿಯಬಾರದು. ಓದುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಪುಸ್ತಕ ಅನಾವರಣಗೊಳಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಸಿಇಒ ಕೆ.ದಯಾನಂದ್ ಮಾತನಾಡಿ ಅಲ್ಲಮ ಕೃತಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅಲ್ಲಮನನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಚಾರ. ಅಲ್ಲಮನ ಬಗ್ಗೆ ನಾಟಕ, ಸಿನಿಮಾ ಮಾಡಿ ದರೂ ಅವು 4 ದಿನವೂ ಪ್ರದರ್ಶನವಾಗಲಿಲ್ಲ ಎಂದರು. ಆಶಯ ಭಾಷಣ ಮಾಡಿದ ಅಂಕಣಕಾರ ಬಿ. ಚಂದ್ರೇಗೌಡ ಮಾತನಾಡಿ, 12ನೇ ಶತಮಾನದಲ್ಲೇ ಸಮಾಜದಲ್ಲಿದ್ದ ಅಜ್ಞ್ಞಾನ, ಅಂಧಕಾರ, ಮೂಢ ನಂಬಿಕೆಗಳ್ನು ವಿರೋಧಿಸಿದ ಮಹಾ ವಚನಕಾರ ಅಲ್ಲಮಪ್ರಭು, ಇವರ ಕಾವ್ಯ ಪ್ರತಿಭೆಯನ್ನು ಸಿನೆಮಾ ಮತ್ತು ನಾಟಕಗಳಲ್ಲಿ ತೋರಿಸುವುದು ಅಸಾಧ್ಯ ಎಂದು ತಿಳಿಸಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿನ ಅನಿಷ್ಠಗಳಾದ ದಾಸ್ಯ, ಜಾತೀಯತೆ, ಕಂದಾಚಾರ ಹಾಗೂ ಮೂಢನಂಬಿಕೆಗಳ ವಿರುದ್ಧ 12ನೇ ಶತಮಾನದಲ್ಲಿ ಹೋರಾಟ ನಡೆಸಿದ ಪ್ರಪಂಚ ಕಂಡ ಸಭಾಧ್ಯಕ್ಷ ಅಲ್ಲಮರು. ಬುದ್ಧನ ಕಾಲದಲ್ಲೇ ರಾಜ, ಮಂತ್ರಿಗಳನ್ನು ಪ್ರಶ್ನೆ ಮಾಡುವ ಮನೋಬಾವ ಹೊಂದಿದ್ದ ಕಾರಣ ಅನುವ ಮಂಟಪದಲ್ಲಿ ಭಾಗವಹಿಸಿ ಪ್ರಶ್ನಿಸುವ ಅಧಿಕಾರ ಅಲ್ಲಮರಿಗೆ ನೀಡಲಾಗಿತ್ತೆಂದು ತಿಳಿಸಿದರು. ಪುಸ್ತಕದ ಲೇಖಕ ರವೀಶ್ ಕ್ಯಾತನಬೀಡು ಮಾತನಾಡಿ, ಪುಸ್ತಕ ಬರವಣಿಗೆಗೆ ಪ್ರೇರೇಪಿಸಿ, ಬೆನ್ನಲುಬಾಗಿ ನಿಂತ ಕುಟುಂಬ ಹಾಗೂ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಜಿಲ್ಲೆಯಲ್ಲಿ ಉಪವಿಬಾಗಾಧಿಕಾರಿಗಳಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿ ಈ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಓ ಆಗಿ ಕೆಲಸ ನಿರ್ವಹಿಸುತ್ತಿರುವ ಕೆ.ದಯಾನಂದ್‌ರನ್ನು ವಿವಿಧ ಸಂಘಟನೆಗಳು ಸನ್ಮಾನಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ್ ಸನ್ಮಾನಿತರನ್ನು ಪರಿಚಯಿಸಿದರು. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್, ಶಾಂತಿನಿಕೇತನ ಹಾರ್ಟ್ ಫೌಂಡೇಶನ್‌ನ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯಾ ಉಪಸ್ಥಿತರಿದ್ದರು. ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಸೂರಿ ಪ್ರಭು ಸ್ವಾಗತಿಸಿದರು. ಲೋಕೇಶಪ್ಪ ವಂದಿಸಿದರು. ಮಂಜುನಾಥ್‌ಸ್ವಾಮಿ ನಿರೂಪಿಸಿದರು.