×
Ad

ಸಂವಿಧಾನ ಬದಲಿಸುವುದು ಜನಿವಾರ ಬದಲಿಸಿದಷ್ಟು ಸುಲಭವಲ್ಲ: ಜ್ಞಾನಪ್ರಕಾಶ್ ಸ್ವಾಮಿಜಿ

Update: 2017-12-26 22:13 IST

ಮೈಸೂರು,ಡಿ.26: ಸಂವಿಧಾನ ಬದಲಿಸುವುದು ಜನಿವಾರ ಬದಲಿಸಿದಷ್ಟು ಸುಲಭವಲ್ಲ. ನಿಮಗೆ ತಾಕತ್ತಿದ್ದರೆ ಸಂಸತ್ತಿನಲ್ಲಿ ಮಂಡಿಸಿ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸವಾಲು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತ್ಯಾತೀತರ ರಕ್ತದ ಬಗ್ಗೆ ಮಾತನಾಡುವ ನೀವು ಬಹುತ್ವದ ವಿರೋದಿ. ನಿಮ್ಮ ರಕ್ತದ ಬಗ್ಗೆ ನಮಗೆ ಸಂಶಯ ಮೂಡುತ್ತಿದೆ. ನಿಮ್ಮ ಕೊಳಕು ನಾಲಿಗೆ ನೀವು ಯಾರು ಎಂದು ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡ ಅವರು ಜಾತ್ಯಾತೀತದ ಮೇಲೆ ನಂಬಿಕೆ ಇಟ್ಟವರು, ಅವರು ದೇಶದ ಪ್ರಧಾನಿ ಯಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅವರು ಇಂತಹ ಕೊಳಕು ಮಾತನಾಡಿರುವ ಅನಂತಕುಮಾರ್ ಹೆಗಡೆ ವಿರುದ್ಧ ಧ್ವನಿ ಎತ್ತಬೇಕು. ಆಗ ಅಂತಹವರಿಗೆ ಬುದ್ದಿ ಬರಲಿದೆ ಎಂದು ಹೇಳಿದರು.

ಪದೇ ಪದೇ ದೇಶದ್ರೋಹದ ಹೇಳಿಕೆಯನನ್ನು ಕೊಟ್ಟು ದೇಶದ ಪ್ರಗತಿಗೆ ಕಂಟಕ ಪ್ರಾಯವಾದ ಇಂತವರ ವಿರುದ್ಧ ದೇಶದ್ರೋಹದ ಆಪಾದನೆಯಡಿ ಸೆಕ್ಷನ್ 124-ಎ, 153ರ ಅಡಿಯಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಚೋರನಹಳ್ಳಿ ಶಿವಣ್ಣ, ಎಸ್.ಡಿ.ಪಿ.ಐ ನ ಕೌಶನ್ ಬೇಗ್, ತುಂಬಲ ರಾಮಣ್ಣ , ಮುತ್ತುರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News