×
Ad

ಗುಡ್ಡೆಹೊಸೂರು ಸ್ಥಾನೀಯ ಸಮಿತಿ ಧರಣಿ

Update: 2017-12-26 22:33 IST

ಕುಶಾಲನಗರ, ಡಿ. 26: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಪ್ರಾರಂಭಿಸಿರುವ ಮೂರನೇ ಹಂತದ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗುಡ್ಡೇಹೊಸೂರು ಸ್ಥಾನೀಯ ಸಮಿಯಿ ವತಿಯಿಂದ ಮಂಗಳವಾರ ಪಟ್ಟಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿ ನಡೆಸಲಾಯಿತು.

ಧರಣಿ ಸ್ಥಳದಿಂದ ಕಾರ್ಯಪ್ಪಸರ್ಕಲ್‌ವರೆಗೆ ಮೆರವಣಿಗೆ ಹೊರಟ ಧರಣಿನಿರತರು, ಕೆಲಕಾಲ ರಸ್ತೆತಡೆ ನಡೆಸಿದರು.ಬಳಿಕ ಮಾನವ ಸರಪಳಿ ನಿರ್ಮಿಸಿ ಕಾವೇರಿ ತಾಲೂಕು ಪರ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹಾಗೂ ಗುಡ್ಡೇಹೊಸೂರು ಸ್ಥಾನೀಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News