ಕುವೆಂಪು ಉತ್ಸವ ಕಾರ್ಯಕ್ರಮ : ಆರ್. ಸತೀಶ್‍ಗೌಡ
ಶಿವಮೊಗ್ಗ,ಡಿ.28: ನವ ಕರ್ನಾಟಕ ಯುವ ಶಕ್ತಿ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಡಿ.29 ರಂದು ಕನ್ನಡ ರಾಜ್ಯೋತ್ಸವ ಮತ್ತು ಕುವೆಂಪು ಉತ್ಸವ ಕಾರ್ಯಕ್ರಮ ಹಮ್ಮಕೊಂಡಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷ ಆರ್. ಸತೀಶ್ ಗೌಡ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುವೆಂಪು ಉತ್ಸವ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 8ಕ್ಕೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಗೋಪಾಳ ಕೊನೆಯ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ಯುವ ಶಕ್ತಿ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ ನೇತೃತ್ವದಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ಗೋಪಾಳದ ಕೊನೆ ಬಸ್ ನಿಲ್ದಾಣದಿಂದ ಆರಂಭಗೊಳ್ಳುವ ಮೆರವಣಿಗೆ ಆಯನೂರು ಗೇಟ್, ಬಸ್ ನಿಲ್ದಾಣ, ಶಿವಪ್ಪ ನಾಯಕ ವೃತ್ತ ಮಾರ್ಗವಾಗಿ ಸಂತೆ ಮೈದಾನ ಮೂಲಕ ವಿನಾಯಕ ವೃತ್ತ ತಲುಪಿ ಅಲ್ಲಿಂದ ಗೋಪಾಳದ ಕೊನೆ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪುರವರ ಜನ್ಮದಿನೋತ್ಸವದ ಅಂಗವಾಗಿ ಕುವೆಂಪು ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 5 ಗಂಟೆಯಿಂದ ಕಿರುತೆರೆ ಹಾಗೂ ಚಲನಚಿತ್ರ ನಟ-ನಟಿಯರು ಕಿರುತೆರೆ ಬಾಲಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಲಾವಿದರುಗಳಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ರಾಷ್ಟ್ರಕವಿ ಕುವೆಂಪು ಕುರಿತು ಪ್ರೊ.ರಾಜೇಂದ್ರ ಚೆನ್ನಿ ಹಾಗೂ ಸಾಹಿತಿ ಚಂದ್ರೇಗೌಡ ಮಾತನಾಡಲಿರುವರು ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಸಂಘಟನೆಯ ಉಮೇಶ್, ಜಗದೀಶ್, ಪ್ರಭುಚಂದ್ರ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.