ನೀರು ಕೊಡುತ್ತೇವೆಂದು ಗೋವಾ ಸಿಎಂ ಪ್ರಮಾಣ ಪತ್ರ ನೀಡಲಿ : ಸಿದ್ದರಾಮಯ್ಯ

Update: 2017-12-27 15:00 GMT

ಚಿತ್ರದುರ್ಗ, ಡಿ.27: ಗೋವಾ ಮುಖ್ಯಮಂತ್ರಿ ಪಾರಿಕ್ಕರ್‌ಗೆ ಕರ್ನಾಟಕದ ಸಿಎಂ ಅಸ್ಪಶ್ಯ ಹಾಗಾಗಿ ನಾನು ಅವರೊಂದಿಗೆ ಮಾತನಾಡುವುದಿಲ್ಲ. ಕರ್ನಾಟಕಕ್ಕೆ ನೀರು ಕೊಡುತ್ತೇವೆ ಎಂದು ಪಾರಿಕ್ಕರ್ ಮಹಾದಾಯಿ ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ಜಿಲ್ಲೆಯ ಹೊಳಲ್ಕೆರೆಯಲ್ಲಿ ಸಾಧನಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರಿಗೆ ಮಹಾದಾಯಿ ನೀರನ್ನು ಡಿ.15ರೊಳಗೆ ಹರಿಸುತ್ತೇನೆ ಎಂದು ಯಡಿಯೂರಪ್ಪ ರಾಜ್ಯದ ಜನರ ದಾರಿ ತಪ್ಪಿಸಿದರು. ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯುವುದು ಶಿಷ್ಟಾಚಾರ. ನನಗೆ ಪತ್ರ ಬರೆಯದಿದ್ದರೂ ಸಭೆ ಕರೆಯಲು ಕೋರಿ ಗೋವಾ ಮುಖ್ಯಮಂತ್ರಿಗಳಿಗೆ ನಾನೇ ಪತ್ರ ಬರೆದಿದ್ದೇನೆ. ನನ್ನ ಜೊತೆ ಮಾತನಾಡಲು ಪಾರಿಕ್ಕರ್‌ಗೆ ಇಷ್ಟ ವಿಲ್ಲದಿದ್ದರೆ ಅವರು ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಮಹದಾಯಿಗಾಗಿ ಇಡೀ ಉತ್ತರ ಕರ್ನಾಟಕ ಬಂದ್ ಆಗಿದೆ. ಬಿಜೆಪಿಯವರು ನಾಟಕ ಆಡುತ್ತಿದ್ದಾರೆ. ರಾಜ್ಯದ ಆರು ಕೋಟಿ ಜನರ ಪ್ರತಿನಿಧಿ ನಾನು. ನನಗೆ ಕನಿಷ್ಠ ಸೌಜನ್ಯಕ್ಕಾದರೂ ಪತ್ರ ಬರೆಯಬೇಕಿತ್ತು ಎಂದ ಅವರು, ನಾನು ಪ್ರತಿಷ್ಟೆ ಬಿಟ್ಟು ಮಾತುಕತೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರಗ ಪರಿಕ್ಕರ್‌ಗೆ ಪತ್ರ ಬರೆದಿದ್ದೇನೆ. ಆದರೆ ಇನ್ನೂ ಉತ್ತರ ನೀಡಿಲ್ಲ ಎಂದು ಟೀಕಿಸಿದರು.

ಇದೀಗ ಪರಿಕ್ಕರ್ ಅವರು, 2018ರ ವಿಧಾನಸಭೆ ಚುನಾವಣೆ ಆದ ಬಳಿಕ ಮಾತುಕತೆ ಮಾಡುವೆ ಎಂದು ಪರಿಕ್ಕರ್ ಹೇಳಿದ್ದಾರೆ. ಚುನಾವಣೆ ಆದ ಮೇಲೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಆಗ ಮಾತನಾಡುವೆ ಎಂದು ಹೇಳುತ್ತಿದ್ದಾರೆ. ಆದರೆ, ಯಡಿಯೂರಪ್ಪಅವರಪ್ಪನಾಣೆಗೂ ಸಿಎಂ ಆಗುವುದಿಲ್ಲ. ರಾಜ್ಯದ ಹಣವನ್ನು ಲೂಟಿ ಹೊಡೆದವರಿಗೆ, ಜೈಲಿಗೆ ಹೋದವರಿಗೆ ರಾಜ್ಯದ ಜನ ಎಂದೂ ಅಧಿಕಾರ ಕೊಡುವುದಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಇತ್ತೀಚೆಗೆ ದಲಿತರ ಮನೆಗೆ ಹೋಗಿ ಹೋಟೆಲ್ ತಿಂಡಿ ತಿಂದು ಬಿಜೆಪಿ ನಡಿಗೆ ದಲಿತ ಮನೆ ಕಡೆಗೆ ಅಂತ ಹೇಳಿದರು. ಆದರೆ, ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ಒಮ್ಮೆಯೂ ದಲಿತರ ಮನೆಗೆ ಹೋಗಲಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News