×
Ad

ಮಂಡ್ಯ : ಅತ್ಯಾಚಾರ ಆರೋಪಿಯ ಬಂಧನ

Update: 2017-12-27 22:33 IST

ಮಂಡ್ಯ, ಡಿ.27 ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ದಲಿತ ಮಹಿಳೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಟ್ಟಸೋಮನಹಳ್ಳಿ ಗ್ರಾಮದ ಕುಮಾರ್ ಅತ್ಯಾಚಾರಿ ಆರೋಪಿ. ಈತ ಕಳೆದ ನ.29ರಂದು ತನ್ನ ಗ್ರಾಮದಲ್ಲೇ ಮನೆಯಲಿದ್ದ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಎನ್ನಲಾಗಿದೆ.

ಸರ್ಕಲ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ನೇತೃತ್ವದಲ್ಲಿ ಆರೋಪಿ ಪತ್ತೆಗೆ ಮುಂದಾಗಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News