×
Ad

ಮದ್ದೂರು : ಮಹಾದಾಯಿ ಹೋರಾಟ ಬೆಂಬಲಿಸಿ ರಸ್ತೆತಡೆ

Update: 2017-12-27 22:35 IST

ಮದ್ದೂರು, ಡಿ.27: ಮಹಾದಾಯಿ ಕುಡಿಯುವ ನೀರಿನ ಯೋಜನೆ ವಿವಾದವನ್ನು ಬಗೆಹರಿಸುವಂತೆ ಒತ್ತಾಯಿಸಿ ತೆಂಗುಬೆಳೆಗಾರರ ಸಂಘದ ವತಿಯಿಂದ ಪಟ್ಟಣದ ಸಡಿಕಾರಿ ಬಸ್ ನಿಲ್ದಾಣದ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ  ಮಾಡಿದರು.

ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕೂಡಲೇ ಮಹದಾಯಿ ವಿವಾದ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ತೆಂಗುಬೆಳೆಗಾರರ ಸಂಘದ ವತಿಯಿಂದ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್‍ಚನ್ನಸಂದ್ರ, ತಮ್ಮಣ್ಣಗೌಡ, ಜಮೀರ್ ಅಹಮದ್, ಅರುಣ್, ಪರ್ವಿಜ್‍ಪಾಷ, ಕಾಜಾ, ನಾಗರಾಜು ಇನ್ನಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News