ಡಿ.30ರಂದು ನಡೆಯುವ ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ವೇದಿಕೆ ಸಿದ್ಧತೆ
ಮೂಡಿಗೆರೆ, ಡಿ.28: ನವಕರ್ನಾಟಕ ನಿರ್ಮಾಣಕ್ಕಾಗಿ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ಡಿ.30ರಂದು ಮೂಡಿಗೆರೆಗೆ ಆಗಮಿಸುವ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ಯಾನರ್, ಬಂಟಿಂಗ್ಸ್ ಸೇರಿದಂತೆ ಅಡ್ಯಂತಾಯ ರಂಗಮಂದಿರದಲ್ಲಿ ಸಮಾವೇಶ ನಡೆಯುವ ವೇದಿಕೆ ಅಲಂಕಾರ ಅದ್ದೂರಿಯಾಗಿ ತಯಾರಿ ಮಾಡಲಾಗುತ್ತಿದೆ.
ಪರಿವರ್ತನೆ ಯಾತ್ರೆ ಸಂಚಾಲಕ ಹಾಗೂ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾವೇಶ ಯಶಸ್ವಿಯಾಗಿ ನಡೆಸಲು ಆಹಾರ, ಅಲಂಕಾರ, ವೇದಿಕೆ, ಪಾರ್ಕಿಂಗ್ ಸೇರಿದಂತೆ 22 ಸಮಿತಿ ರಚನೆ ಮಾಡಲಾಗಿದೆ. ಮೂಡಿಗೆರೆ ಮತ್ತು ಆಲ್ದೂರು ಮಂಡಲದ 9 ಶಕ್ತಿ ಕೇಂದ್ರಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆ ತರುವ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಬೆಳಗ್ಗೆ 11 ಗಂಟೆಗೆ ಕೊಲ್ಲಿಬೈಲ್ ಸರ್ಕಲ್‍ನಿಂದ ಶನೇಶ್ವರ ದೇವಸ್ಥಾನದವರೆಗೆ ನಡೆಯುವ ಯಾತ್ರೆ ರ್ಯಾಲಿಯಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬೈಕ್‍ಗಳು ಪಾಲ್ಗೊಳ್ಳಲಿದೆ. ದೇವಸ್ಥಾನದಿಂದ 200ಕ್ಕೂ ಅಧಿಕ ಸುಮಂಗಲಿಯರಿಂದ ಪೂರ್ಣಕುಂಬದೊಂದಿಗೆ ವಿಜ್ರಂಭಣೆಯಿಂದ ಸ್ವಾಗತಿಸಲು ತಯಾರಿ ನಡೆಸಲಾಗಿದೆ. ಅಲ್ಲಿಂದ ನಾಸಿಕ್ ಡೋಲ್, ಮಲೆನಾಡ ನಿಶಾನಿಯೊಂದಿಗೆ ರಂಗಮಂದಿರಕ್ಕೆ ಕರೆ ತರಲಾಗುವುದು ಎಂದು ಮಾಹಿತಿ ನೀಡಿದರು.