×
Ad

ಕೆಪಿಸಿಸಿಗೆ ಹೆಚ್ಚುವರಿಯಾಗಿ 108 ಪದಾಧಿಕಾರಿಗಳ ನೇಮಕ

Update: 2017-12-28 22:12 IST

ಬೆಂಗಳೂರು, ಡಿ. 28: ಕೆಪಿಸಿಸಿಗೆ ಮೂವರು ಉಪಾಧ್ಯಕ್ಷರು, 16 ಪ್ರಧಾನ ಕಾರ್ಯದರ್ಶಿಗಳು, 78 ಕಾರ್ಯದರ್ಶಿಗಳು, 11 ಕಾರ್ಯಕಾರಿಣಿ ಸಮಿತಿ ಸದಸ್ಯರು ಸೇರಿದಂತೆ ಹೆಚ್ಚುವರಿಯಾಗಿ 108 ಪದಾಧಿಕಾರಿಗಳನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಆದೇಶ ಹೊರಡಿಸಿದ್ದಾರೆ.

ಉಪಾಧ್ಯಕ್ಷರು: ವಿ.ಆರ್.ಸುದರ್ಶನ್, ಮಂಜುನಾಥ್ ಭಂಡಾರಿ ಹಾಗೂ ವೆಂಕಟಮುನಿಯಪ್ಪರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಅಝೀಝ್, ಡಾ.ಝೀಯಾ ಹಫೀಝ್, ಎ.ಸಿದ್ದರಾಜು, ಗಾಯತ್ರಿ ಶಾಂತೇಗೌಡ, ರುಕುಮ್ ಪಟೇಲ್, ಎಸ್.ಎಂ.ಆನಂದ್, ಎಸ್.ಎಫ್.ಎಚ್.ಗಾಜಿಗೌಡ, ಸಕೀರ್ ಸನದಿ, ಕೆ.ಪಿ.ಚಂದ್ರಕಲಾ, ಸತ್ಯನ್ ಪುತ್ತೂರ್, ರೂಪಾ ಶಶಿಧರ್, ಅನಿಲ್ ಕುಮಾರ್, ಹಸನ್ ಸಾಬ್ ದೋತಿಹಾಳ್, ನವೀನ್ ಭಂಡಾರಿ, ಶಾಂತರಾಮ್ ಹೆಗ್ಡೆ ಹಾಗೂ ಸುಹೇಲ್.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು: ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಜಾವಗಲ್ ಮಂಜುನಾಥ್ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಸಿ.ಡಿ.ಗಂಗಾಧರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News