ಬಾಬಾಬುಡಾನ್‌ಗಿರಿಯನ್ನು ಸೌಹಾರ್ದ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕು: ತೀಸ್ತಾ ಸೆಟಲ್ವಾಡ್

Update: 2017-12-28 16:58 GMT

ಚಿಕ್ಕಮಗಳೂರು, ಡಿ.28: ಸೂಫಿ ಸಂತರ ಭಾವೈಕ್ಯತಾ ಕೇಂದ್ರವಾದ ಬಾಬಾಬುಡಾನ್‌ಗಿರಿಯನ್ನು ಸೌಹಾರ್ದ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು ಎಂದು ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ.

 ಕೋಮು ಸೌಹಾರ್ದ ವೇದಿಕೆಯ ಸೌಹಾದರ್ ಮಂಟಪ ಗುರುವಾರ ಹಮ್ಮಿಕೊಂಡಿದ್ದ ಬಾಬಾಬುಡಾನ್‌ಗಿರಿಗೆ ಸೌಹಾದರ್ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರದಲ್ಲಿರುವ ಕೆಲವೇ ಭಾವೈಕ್ಯ ತಾಣಗಳಲ್ಲಿ ಇದೂ ಒಂದಾಗಿದೆ. ಇಲ್ಲಿನ ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು, ಹಚ್ಚ ಹಸಿರಿನಿಂದ ಕಂಗೊಳಿಸಿ ಪ್ರವಾಸಿಗರಿಗೆ ಮುಕ್ತವಾಗಿದ್ದ ಈ ಪ್ರದೇಶವನ್ನು ಜೈಲಿನಂತೆ ಪರಿವರ್ತಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಕೋಮುಸೌಹಾದರ್ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಘ ಪರಿವಾರದ ಎಲ್ಲ ರೀತಿಯ ಪ್ರತಿರೋಧಗಳನ್ನು ಹಿಮ್ಮೆಟ್ಟಿಸಿ ಬಾಬಾಬುಡಾನ್‌ಗಿರಿಯನ್ನು ಸೌಹಾದರ್ ಕೇಂದ್ರವಾಗಿ ಉಳಿಸಿಕೊಳ್ಳುವಲ್ಲಿ ಸಂಘಟನೆ ವಹಿಸಿದ ಪಾತ್ರ ಗಣನೀಯ. ಇದರಲ್ಲಿ ಗೌರಿ ಲಂಕೇಶ್ ಪಾತ್ರವೂ ಸ್ಮರಣೀಯವಾಗಿದೆ ಎಂದು ನುಡಿದರು.

ಎಲ್ಲೆಡೆ ಸೌಹಾರ್ದ ಘೋಷಣೆ

ಸೌಹಾದರ್ ಮಂಟಪ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಎಲ್ಲೆಡೆ ಸೌಹಾರ್ದ ಘೋಷಣೆಗಳನ್ನು ಒಳಗೊಂಡ ಬಿತ್ತಿ ಪತ್ರಗಳು ರಾರಾಜಿಸಿದವು.

ಗೌರಿ ಲಂಕೇಶ್ ಸಾಗಿಸಿದ ಹಾದಿಯನ್ನು ಬಿಂಬಿಸುವ ಚಿತ್ರ ಪ್ರದರ್ಶನ, ಕೋಮು ಸೌಹಾರ್ದ ವೇದಿಕೆ ಹದಿನೈದು ವರ್ಷದ ಸಾರ್ಥಕ ಸಾಧನೆಯ ಚಿತ್ರ ಪ್ರದರ್ಶನ ಗಮನ ಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News