×
Ad

ದಾವಣಗೆರೆ: ಹೊಸ ವರ್ಷಾಚರಣೆಗೆ ಕಟ್ಟು ನಿಟ್ಟಿನ ಕ್ರಮ

Update: 2017-12-29 19:43 IST

ದಾವಣಗೆರೆ,ಡಿ.29 : ಹೊಸ ವರ್ಷದ ಹಿನ್ನಲೆಯಲ್ಲಿ ಡಿ.31ರಂದು ಮಧ್ಯ ರಾತ್ರಿ 12.30ಕ್ಕೆ ಮೊದಲು ಹೊಸ ವರ್ಷದ ಕಾರ್ಯಕ್ರಮಗಳನ್ನು ಮುಕ್ತಾಯ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭಿಮಾಶಂಕರ್ ಎಸ್. ಗುಳೇದ್ ಸೂಚಿಸಿದ್ದಾರೆ.

ಹೊಸ ವರ್ಷ ಆಚರಣೆ ಮಾಡುವ ಆಯೋಜಕರು ಕಾರ್ಯಕ್ರಮ ನಡೆಯುವ ಸ್ಥಳ, ವೇಳೆ ಮತ್ತು ಭಾಗವಹಿಸುವವರ ಸಂಖ್ಯೆಯ ವಿವರವನ್ನು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯತಕ್ಕದ್ದು. ರಾತ್ರಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಮಹಿಳೆಯನ್ನು ಚುಡಾಯಿಸುವುದು, ಅಸಭ್ಯ ವರ್ತನೆ ಮಾಡಿದ್ದು ಕಂಡಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ವಾಹನಗಳ ವೇಗವಾಗಿ ಚಾಲನೆ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕೂಗುವುದು, ಕಿರಚುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ದ್ವಿ ಚಕ್ರ ವಾಹನಗಳಲ್ಲಿ 3 ಜನ ಸವಾರಿ ಮಾಡುವುದು ಮತ್ತು ವಾಹನಗಳ ಸೈಲೆನ್ಸರ್‍ಗಳನ್ನು ತೆಗೆದು ಕರ್ಕಶ ಶಬ್ದ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸಾರ್ವಜನಿಕರಿಗೆ ಬಣ್ಣ ಎರಚುವುದು,  ಸಾರ್ವಜನಿಕರ ಪ್ರದೇಶಗಳಲ್ಲಿ ಡ್ರಮ್, ಧ್ವನಿ ವರ್ದಕಗಳನ್ನು ಹಾಕಿಕೊಂಡು ಗುಂಪಾಗಿ ನರ್ತಿಸುವುದನ್ನು ಸಹ ನಿಷೇಧಿಸಲಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News