ಮೂಡಿಗೆರೆ:ಜಾಧವ್ ಕುಟುಂಬಸ್ಥರಿಗೆ ಕಿರುಕುಳಕ್ಕೆ ಖಂಡನೆ ;ಪಾಕ್ ಧ್ವಜ ಸುಟ್ಟು ಪ್ರತಿಭಟನೆ
Update: 2017-12-29 19:53 IST
ಮೂಡಿಗೆರೆ, ಡಿ.29: ಪಾಕ್‍ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಹೋಗಿದ್ದ ಪತ್ನಿ ಮತ್ತು ತಾಯಿಗೆ ಕಿರುಕುಳ ನೀಡಿರುವ ಪಾಕಿಸ್ತಾನದ ವಿಕೃತಿಯನ್ನು ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಪಟ್ಟಣದ ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಪಾಕಿಸ್ತಾನದ ಧ್ವಜವನ್ನು ಸುಟ್ಟು, ಪಾಕ್ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭರತ್ ಕನ್ನೇಹಳ್ಳಿ, ಅವಿನಾಶ್, ವಿನೋದ್ ಕಣಚೂರು, ಪರೀಕ್ಷಿತ್ ಜಾವಳಿ, ಧನಿಕ್ ಕೋಡದಿಣ್ಣೆ, ಸಂದರ್ಶ, ಅರುಣ್ ಚೇತನ್ ಮತ್ತಿತರರು ಇದ್ದರು.