ಕೋಲಾರ :ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಶಿಲ್ಲಂಗೆರೆ ಯುವಕರಿಂದ ಪ್ರತಿಭಟನೆ
ಕೋಲಾರ,ಡಿ.29: ಕೋಲಾರ ತಾಲ್ಲೂಕು ಶಿಳ್ಳಂಗೆರೆ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾ ಪಂಚಾಯತ್ ಮುಂದೆ ಶಿಳ್ಳಂಗೆರೆ ಗ್ರಾಮಸ್ಥರು ಮತ್ತು ಕುವೆಂಪು ಕನ್ನಡ ಯುವಕರ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು..
ಕೋಲಾರ ತಾಲ್ಲೂಕು ಹರಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶಿಳ್ಳಂಗೆರೆ ಗ್ರಾಮದಲ್ಲಿ ಸುಮಾರು 4000 ಜನಸಂಖ್ಯೆ ವಾಸವಾಗಿದ್ದು, ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಇದ್ದು, ಗ್ರಾಮ ಪಂಚಾಯಿತಿಯಗೆ ಸಮಸ್ಯೆಗಳನ್ನು ಬಗೆಹರಿಸಲು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಗತಿ ಕಾಣದಾಗಿದೆ. ಹರಟಿ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕುವೆಂಪು ಯುವಕರ ಸೇನೆಯಿಂದ ಮನವಿ ನೀಡಲಾಗಿತ್ತು. ಮನವಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಕೋರಲಾಗಿತ್ತು. ಆದರೂ ಪಂಚಾಯಿತಿಯ ಯಾರೋಬ್ಬರೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಆರೋಪಿಸಿದ್ದಾರೆ.
ಶಿಳ್ಳಂಗೆರೆ ಗ್ರಾಮದಲ್ಲಿ ಮುಖ್ಯ ರಸ್ತೆಯು ತುಂಬಾ ಹದಗೆಟ್ಟಿದ್ದು, ಶಾಲಾಮಕ್ಕಳು, ವೃದ್ಧರು ರಸ್ತೆಯಲ್ಲಿ ಸಂಚರಿಸಲು ಕಷ್ಠಕರವಾಗಿರುತ್ತದೆ. ಇನ್ನು ಮಳೆಗಾಲದಲ್ಲಿ ಅಳಕೊಳ್ಳಗಳಿಂದ ರಸ್ತೆಯೂ ಪೂರ್ತಿ ಕೆಸರು ಗದ್ದೆಯಂತೆ ಕಾಣುತ್ತದೆ. ಉಪ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು 24 ಗಂಟೆಗಳೂ ವೈದ್ಯಕೀಯ ಸೌಲಭ್ಯಗಳು ದೊರೆಕಿಸಿಕೊಡಬೇಕೆಂದು ಒತ್ತಾಯಿಸಲಾಯಿತು.
ಗ್ರಾಮದ ವೆಂಕಟಪ್ಪನ ಮನೆಯವರೆಗೂ ರಾಜಬೀದಿ ಇದ್ದು, ಈ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿ, ಎರಡೂ ಬದಿಯಲ್ಲೂ ನೀರು ಹೋಗಲು ಒಳಚರಂಡಿ ನಿರ್ಮಿಸಿ ವೃದ್ದರು ಶಾಲಾಮಕ್ಕಳು ವಾಹನಗಳು ಸರಾಗವಾಗಿ ಚಲಿಸಲು ಅನುಕೂಲವಾಗಿದೆ, ಶಾಸಕರ ನಿಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಸರಿಯಾದ ನಿರ್ವಹಣೆಯಿಲ್ಲದೆ ಚಿಲ್ಲರೆ ಅಂಗಡಿಯಂತೆ ಮುಚ್ಚಿಹಾಕುತ್ತಾರೆ. ಅದನ್ನು ಪುನರಾರಂಭಿಸಬೇಕೆಂದು ಹಾಗೂ ಗ್ರಾಮದ ಊರುಬಾಗಿಲು ಕಲ್ಲುಗಳು ಬಿದ್ದುಹೋಗಿದ್ದು, ಅದನ್ನು ಕೆಡವಿ ಸಿಮೆಂಟ್‍ನಿಂದ ಕಮಾನು ನಿರ್ಮಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ನಂತರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ನಾರಾಯಣ್‍ರವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ್, ಪವನ್, ಅನಿಲ್, ಚೌಡೇಶ್, ನಾರಾಯಣಸ್ವಾಮಿ, ರವಿ, ಪ್ರವೀಣ್, ಶ್ರೀನಿವಾಸ್, ಅರುಣ್, ಹೂಹಳ್ಳಿ ನಾಗರಾಜ್, ಪ್ರೇಮ್, ಮಧು, ನಾರಾಯಣಸ್ವಾಮಿ, ಸುರೇಶ್, ಸುಮನ್, ಮಣಿ, ನಾಗರಾಜ್ ಮಾರುತಿ, ಮಹೇಶ್‍ಬಾಬು, ಅಪ್ಪು ಭಾಗವಹಿಸಿದ್ದರು.