ರಾಷ್ಟ್ರಕವಿ ಕುವೆಂಪುಗೆ ಡೂಡಲ್ ಗೌರವ

Update: 2017-12-29 18:21 GMT

ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನವಾದ ಶುಕ್ರವಾರ ಅಂತರ್ಜಾಲ ಸರ್ಚ್ ಇಂಜಿನ್ ಗೂಗಲ್ ತನ್ನ ವಿಶೇಷ ಡೂಡಲ್‌ನ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಕುವೆಂಪು ಅರ್ಧ ಶತಮಾನದ ಹಿಂದೆ ತನ್ನ 'ರಾಮಾಯಣ ದರ್ಶನಂ' ಕೃತಿಗಾಗಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗರಾಗಿದ್ದರು. ಇದು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬ ರಿಯ ಸುವರ್ಣ ವರ್ಷವೂ ಆಗಿದೆ. ಶ್ವೇತ ವಸ್ತ್ರಧಾರಿ ಕುವೆಂಪು ಅವರು ಹಚ್ಚಹಸಿರು ಪ್ರಕೃತಿಯ ಹಿನ್ನೆಲೆಯಲ್ಲಿ ಬಂಡೆಗಲ್ಲಿನ ಮೇಲೆ ಕುಳಿತುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಚಿತ್ರವನ್ನು ಹೊಂದಿರುವ ಡೂಡಲ್‌ನಲ್ಲಿ ಕನ್ನಡದಲ್ಲಿಯೇ ಗೂಗಲ್ ಎಂದು ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor