ಗುಂಡ್ಲುಪೇಟೆ: ಬೆಂಕಿಗಾಹುತಿಯಾದ ಜೀಪ್; ಅಪಾರ ನಷ್ಟ
Update: 2017-12-30 18:21 IST
ಗುಂಡ್ಲುಪೇಟೆ,ಡಿ.30: ರಸ್ತೆಯಲ್ಲಿ ಹರಡಿದ್ದ ಹುರುಳಿ ಬೆಳೆಯ ಮೇಲೆ ಸಂಚಾರ ಮಾಡುವಾಗ ಬಳ್ಳಿಗಳು ಸುತ್ತಿಕೊಂಡು ಬೆಂಕಿಹೊತ್ತಿದ ಪರಿಣಾಮ ಬಂಡೀಪುರ ಸಮೀಪದ ಖಾಸಗಿ ರೆಸಾರ್ಟಿಗೆ ಸೇರಿದ ಜೀಪೊಂದು ಬೆಂಕಿಗಾಹುತಿಯಾಗಿದೆ.
ಡಿ.29ರ ಸಂಜೆ ಬಂಡೀಪುರ ಸಮೀಪದ ಕಂಟ್ರಿಕ್ಲಬ್ ಗೆ ಸೇರಿದ ವಾಹನ ನೂತನ ಪೀಠೋಪಕರಣಗಳನ್ನು ತುಂಬಿಕೊಂಡು ಮಂಗಲ ಮಾರ್ಗವಾಗಿ ಸಾಗುವಾಗ ಹುರುಳಿಯ ಬಳ್ಳಿಗಳು ಸುತ್ತಿಕೊಂಡಿವೆ. ಇಂಜಿನ್ ಶಾಖದಿಂದ ಬೆಂಕಿಹೊತ್ತಿಕೊಂಡು ಜೀಪಿನಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಸಂಪೂರ್ಣ ಭಸ್ಮವಾಗಿವೆ. ಬೆಂಕಿ ಹೊತ್ತಿಕೊಂಡ ಕೂಡಲೇ ಜೀಪಿನ ಚಾಲಕ ಕೆಳಗೆ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.