×
Ad

ದಾನಮ್ಮ ಪ್ರಕರಣ: ಜೇವರ್ಗಿ ಬಂದ್ ಮಾಡಿ ಪ್ರತಿಭಟನೆ

Update: 2017-12-30 19:58 IST

ಕಲಬುರಗಿ, ಡಿ.30: ಇತ್ತೀಚೆಗೆ ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ದಾನಮ್ಮಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಜಿಲ್ಲೆಯ ಜೇವರ್ಗಿ ಪಟ್ಟಣ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ವಿಜಯಪುರ ಕ್ರಾಸ್‌ ವರೆಗೆ ಮೆರವಣಿಗೆ ನಡೆಸಲಾಯಿತು. ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ಸೂಚಿಸಿದರು.

ಬೆಂಗಳೂರಿನಿಂದ ಬರುವ ವಾಹನಗಳನ್ನು ಚಿಗರಳ್ಳಿಯಲ್ಲಿ ಪೊಲೀಸರು ತಡೆದಿದ್ದರು. ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ್ ಹರನಾಳ್ ಬಂದ್‌ನ ನೇತೃತ್ವ ವಹಿಸಿದ್ದರು. ಮುಖಂಡರಾದ ಭೀಮರಾಯ ನಗನೂರ, ಗುರಣ್ಣ ಐನಾಪುರ, ಶ್ರೀಮಂತ್ ಧನಕರ್, ಮಲ್ಲಿಕಾರ್ಜುನ್ ಧಿನ್ನಿ, ಉಪನ್ಶಾಸಕ ನಿಜಲಿಂಗ್ ದೊಡ್ಮನಿ ಬಂದ್ ಉದ್ದೇಶಿಸಿ ಮಾತನಾಡಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News