ಕೊಳಕು ಮಂಡಲ ನುಂಗಿದ ನಾಗರಹಾವು

Update: 2017-12-30 17:19 GMT

ಶಿವಮೊಗ್ಗ, ಡಿ. 30: ಫಾರಂ ಹೌಸ್‌ವೊಂದರಲ್ಲಿ ಕಾಣಿಸಿಕೊಂಡಿದ್ದ ಸುಮಾರು ಐದೂವರೆ ಅಡಿ ಉದ್ದದ ನಾಗರ ಹಾವೊಂದು ಬೃಹದಾಕಾರದ ಕೊಳಕ ಮಂಡಲ ಹಾವನ್ನು ನುಂಗಿದ್ದು ಕಂಡುಬಂದಿದೆ. 

ನಗರದ ಹೊರವಲಯ ಮಲವಗೊಪ್ಪದ ತೋಪಿನಘಟ್ಟದಲ್ಲಿರುವ ಮುಹಮ್ಮದ್ ಜಾಫರ್ ಶರೀಫ್ ಎಂಬುವರ ಫಾರಂ ಹೌಸ್‌ನಲ್ಲಿ ದೊಡ್ಡ ಗಾತ್ರದ ನಾಗರಹಾವೊಂದು ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಮನೆಯವರು ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಪರಿಶೀಲಿಸಿದಾಗ ಹಾವಿನ ಹೊಟ್ಟೆ ದಪ್ಪವಾಗಿದ್ದು ಕಂಡುಬಂದಿದೆ. ಕಪ್ಪೆಅಥವಾ ಇಲಿ ನುಂಗಿದ ಕಾರಣದಿಂದ ಹೊಟ್ಟೆ ದಪ್ಪವಾಗಿರುವ ಸಾಧ್ಯತೆಯಿದೆ ಎಂದು ಮೊದಲು ಭಾವಿಸಿದ್ದಾರೆ. ಆದರೆ ಬೃಹದಾಕಾರದ ಕೊಳಕು ಮಂಡಲ ಹಾವನ್ನು ನುಂಗಿ ಅರಗಿಸಿಕೊಳ್ಳಲಾಗದೆ ಹೊರ ಹಾಕಿದೆ.

ನಾಗರಹಾವಿನ ಹೊಟ್ಟೆ ಸೇರಿದ್ದ ಕೊಳಕಮಂಡಲ ಸತ್ತು ಹೋಗಿದ್ದು, ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ನೈಸರ್ಗಿಕ ವ್ಯವಸ್ಥೆಯ ಅಪರೂಪದ ಜೀವ ವೈವಿಧ್ಯವಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡ ವೇಳೆ ಸಾಯಿಸಬೇಡಿ. ತಮಗೆ ಮಾಹಿತಿ ನೀಡಿದರೆ ಅವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಡುವುದಾಗಿ ಸ್ನೇಕ್ ಕಿರಣ್ ನಾಗರಿಕರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News