×
Ad

ದಾವಣಗೆರೆ: ಡಿ.31ರಂದು ಕನ್ನಡನಾಡು ಸಮರ ಸೇನೆ ವತಿಯಿಂದ ಮೌನ ಮೆರವಣಿಗೆ

Update: 2017-12-30 23:10 IST

ದಾವಣಗೆರೆ,ಡಿ.30: ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕನ್ನಡನಾಡು ಸಮರ ಸೇನೆ ವತಿಯಿಂದ ಮೌನ ಮೆರವಣಿಗೆಯನ್ನು ಡಿ.31ರಂದು ನರಗುಂದ-ನವಲಗುಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಶೀಲಾ ಕೊಟ್ರೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಯೋಜನೆ ಜಾರಿಗೆ ಹೋರಾಟ ನಡೆಸುತ್ತಿರುವ ಜನರಿಗೆ ಬೆಂಬಲವಾಗಿ ಚಿತ್ರಕಲಾವಿದ ಜಿ.ಜೆ.ಮೆಹಂದಳೆ ರಚಿತ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಚಳುವಳಿ ಹೋರಾಟಗಾರರ ಭಾವಚಿತ್ರಗಳೊಂದಿಗೆ ಮೌನ ಮೆರವಣಿಗೆ ನಡೆಸಲಾಗುವುದು. ಪ್ರಧಾನ ಮಂತ್ರಿಗಳು ಮೂರೂ ರಾಜ್ಯದ ಮುಖ್ಯಮಂತ್ರಿ ಸಭೆ ಕರೆದು, ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಲಾಗುವುದು ಎಂದರು.

ಚಿತ್ರ ಕಲಾವಿದ ಜಿ.ಜೆ.ಮೆಹಂದಳೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವದ ಹಂಗು ತೊರೆದು ಬ್ರಿಟೀಷರ ವಿರುದ್ಧ ಹೋರಾಡಿದರು. ಇಂದು ದೇಶದ ನಾಗರೀಕರಾದ ನಾವುಗಳು ನಾಡಿನ ನೆಲ, ಜಲಕ್ಕಾಗಿ ಮತ್ತೊಮ್ಮೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಂತರಿಕ ಒಡಕಿನ ಲಾಭ ಪಡೆದಿದ್ದರಿಂದ ಬ್ರಿಟೀಷರು ನಮ್ಮ ದೇಶವನ್ನು 2 ಶತಮಾನಗಳ ಕಾಲ ಆಳುವಂತಾಯಿತು. ಆದ್ದರಿಂದ ನಾವು ಪರಸ್ಪರ ಕಿತ್ತಾಡದೆ, ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಭಾವಚಿತ್ರಗಳೊಂದಿಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಹೊನ್ನಮ್ಮ ದೇವರಬೆಳಕೆರೆ, ನಿರ್ಮಲಾ ಮೃತ್ಯುಂಜಯ, ಟಿ. ಅಜ್ಜೇಶ, ಮುದ್ದಣ್ಣ, ವೆಂಕಟೇಶ ಕಣ್ಣಾಳರ್, ಜಯಮ್ಮ, ಸೋಮಶೇಖರ, ಗಂಗಾಧರ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News