ಓ ಮೆಣಸೇ..

Update: 2018-01-01 06:25 GMT

ಅನಂತ ಕುಮಾರ್ ಹೆಗಡೆ ಹೇಳಿಕೆಯಲ್ಲಿ ವಿವಾದವಾಗುವ ಯಾವುದೇ ಅಂಶ ಇಲ್ಲ.  - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಈ ವಿವಾದಿತ ಹೇಳಿಕೆಗಾಗಿ ನೀವು ಪ್ರತ್ಯೇಕವಾಗಿ ಕ್ಷಮೆಯಾಚಿಸಬೇಕಾಗುತ್ತದೆ.

-------------------

ತಮಿಳುನಾಡಿನಲ್ಲಿ ದೇಗುಲಗಳ ರಕ್ಷಣೆಗೆ ಹಿಂದೂಗಳು ಒಂದಾಗಬೇಕು. - ಎಚ್. ರಾಜ್, ಬಿಜೆಪಿ ನಾಯಕ

ದಲಿತರ ರಕ್ಷಣೆಗೆ ಹಿಂದೂಗಳು ಒಂದಾಗುವುದು ಯಾವಾಗ?
---------------------
ಹೊಸತನಗಳ ಹುಡುಕಾಟದಿಂದ ಸಾಧನೆ ಮಾಡಲು ಸಾಧ್ಯ.- ಉಮಾಶ್ರೀ, ಸಚಿವೆ
ಅನುಭವದ ಮಾತು.

---------------------

ಸಂವಿಧಾನ ಬದಲಾವಣೆ ಚರ್ಚೆ ಕೇಂದ್ರದ ಮುಂದಿಲ್ಲ. - ಶೋಭಾ ಕರಂದ್ಲಾಜೆ, ಸಂಸದೆ

ಆರೆಸ್ಸೆಸ್‌ಗಷ್ಟೇ ಸದ್ಯಕ್ಕೆ ಸೀಮಿತ.

---------------------

ಅಪ್ಪ-ಅಮ್ಮನ ಗುರುತು ಇಲ್ಲದವರು ಜಾತ್ಯತೀತರು. - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಅಟಲ್ ಬಿಹಾರಿ ವಾಜಪೇಯಿ ಮಲಗಿದಲ್ಲೇ ಮಗ್ಗಲು ಬದಲಿಸಿದರಂತೆ.

---------------------
 
ನಾನು ಈ ಮಣ್ಣಿನ ಮಗ. - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದು ನನ್ನ ಮಣ್ಣು ಎಂದು ದೇವೇಗೌಡರು ತಕರಾರು ತೆಗೆದರಂತೆ.

---------------------

ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುವ ಮೂಲಕ ಮಾದರಿಯಾಗಬೇಕು. - ಅಭಯಚಂದ್ರ ಜೈನ್, ಶಾಸಕ

ಅವರು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿಸುವ ಮೂಲಕ ಮಾದರಿಯಾಗುತ್ತಿದ್ದಾರೆ.

---------------------

ಯಡಿಯೂರಪ್ಪ ಸಿಎಂ ಆದ ಮೇಲೆ ಮಹಾದಾಯಿಗೆ ಪರಿಹಾರ. - ಪ್ರಕಾಶ್ ಜಾವಡೇಕರ್, ಬಿಜೆಪಿ ಚುನಾವಣಾ ಉಸ್ತುವಾರಿ

ಅಂತೂ ಮಹಾದಾಯಿ ಸಮಸ್ಯೆ ಪರಿಹಾರವಾಗುವುದೇ ಇಲ್ಲ ಬಿಡಿ.

---------------------

ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿರುವ ಸಿಎಂ ಸಿದ್ದರಾಮಯ್ಯ ಸಮಾಜವಾದಿಯೇ? - ಎಚ್. ವಿಶ್ವನಾಥ್, ಮಾಜಿ ಸಂಸದ

ಬೇರೆಯವರ ಮನೆಯ ಬೆಳ್ಳಿ ತಟ್ಟೆಯಲ್ಲಿ ಮೀನಿನ ಊಟ ಮಾಡಿರುವುದು ಎಂದು ಕೈ ಮೂಸಿಕೊಂಡರಂತೆ ಸಿದ್ದರಾಮಯ್ಯ.

---------------------
ಸಿದ್ದರಾಮಯ್ಯ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ. - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಮೊದಲು ಅನಂತಕುಮಾರ್ ಹೆಗಡೆಯವರಂತಹ ನಾಯಕರು ಬಾಯಿಯಿಂದ ಮಾಡುವ ವಿಸರ್ಜನೆ ನಿಲ್ಲಲಿ.

---------------------
ದಲಿತ ಸಿಎಂ ವಿಚಾರ ಮುಗಿದ ಅಧ್ಯಾಯ.  - ವೀರಪ್ಪ ಮೊಯ್ಲಿ, ಸಂಸದ

ಹೀಗೆ ಹೇಳಿಯೇ ಕಾಂಗ್ರೆಸ್‌ನ್ನು ದೇಶದಲ್ಲಿ ಮುಗಿಸಿದಿರಿ.

---------------------

ತಮಿಳುನಾಡಿನಲ್ಲಿ ಬಿಜೆಪಿ ಆತ್ಮ ವಿಮರ್ಶೆಗೆ ಇದು ಸಕಾಲ.- ಸುಬ್ರಮಣಿಯನ್ ಸ್ವಾಮಿ, ಸಂಸದ

ಆತ್ಮಹತ್ಯೆ ಮಾಡಿಕೊಂಡ ಬಳಿಕ ವಿಮರ್ಶೆ ಮಾಡಿ ಪ್ರಯೋಜನವೇನು?
---------------------
ನಾನು ಪ್ರಧಾನಿ ಆಗಿದ್ದು ದೈವದ ಆಟ. - ದೇವೇಗೌಡ, ಮಾಜಿ ಪ್ರಧಾನಿ

ದೈವದ ಹುಡುಗಾಟ ಎಂದರೆ ಚೆನ್ನಾಗಿರುತ್ತದೆ.
---------------------

ಜಾತ್ಯತೀತಗೆ ನಾವು ಬದ್ಧ. - ಅನಂತ ಕುಮಾರ್, ಕೇಂದ್ರ ಸಚಿವ

ಜಾತ್ಯತೀತರಿಗೆ ತಂದೆ ತಾಯಿ ಇಲ್ಲ ಎಂದದ್ದು ನೀವೇ ಅಲ್ಲವೆ?
---------------------

ಸಾಮಾಜಿಕ ಮಾಧ್ಯಮಗಳು ಅಪಾಯಕಾರಿಯಾಗುತ್ತಿವೆ. - ಬರಾಕ್ ಒಬಾಮ, ಅಮೆರಿಕ ಮಾಜಿ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಟ್ರಂಪ್ ಅದನ್ನು ಬಳಸುವುದಕ್ಕೆ ಶುರು ಹಚ್ಚಿದ ಮೇಲೆ.

---------------------
ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ದೇಶಭಕ್ತಿ ಪ್ರಶ್ನಿಸಿಲ್ಲ. - ಅರುಣ್ ಜೇಟ್ಲಿ, ಕೇಂದ್ರ ಸಚಿವ

ಬಹುಶಃ ಮೋದಿ ಭಕ್ತಿಯನ್ನು ಪ್ರಶ್ನಿಸಿರಬೇಕು.

---------------------
ರಾಮ ಮಂದಿರ ಕಟ್ಟಲು ಹೊರಡುವ ಬಿಜೆಪಿಯವರು ಮೊದಲು ನನ್ನ ಆಶೀರ್ವಾದ ಪಡೆಯಬೇಕು. - ಆರ್.ವಿ. ದೇಶಪಾಂಡೆ, ಸಚಿವ

ಬಾಬರೀ ಮಸೀದಿ ಧ್ವಂಸಕ್ಕೆ ಮುನ್ನ ನಿಮ್ಮ ಆಶೀರ್ವಾದ ಪಡೆದಿರುವ ಸಾಧ್ಯತೆ ಕಾಣುತ್ತದೆ.

---------------------

ಜಾತ್ಯತೀತ ಚಿಂತನೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ ಸಮಾಜ ವಿಭಜಿಸಲು ಹೊರಟಿದೆ. - ಪ್ರಮೋದ್ ಮಧ್ವರಾಜ್, ಸಚಿವ

ಜಾತ್ಯತೀತ ಚಿಂತನೆಯಲ್ಲಿ ನಂಬಿಕೆಯಿಲ್ಲದ ಕೆಲವರು ಕಾಂಗ್ರೆಸನ್ನು ವಿಭಜಿಸುವ ಕುರಿತಂತೆ ಅನುಮಾನಗಳಿವೆ.

---------------------

ಬಿಜೆಪಿ ಸಂಪೂರ್ಣ ಸುಳ್ಳಿನ ಮೇಲೆ ನಿಂತಿದೆ. - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಕಾಂಗ್ರೆಸ್ ಸುಳ್ಳಿನ ಮೇಲೆ ಕುಳಿತಿದೆಯೇ?

---------------------

ಕೆಪಿಸಿಸಿ ನೀಡುವ ಸೂಚನೆ ಪಾಲಿಸುವುದರಲ್ಲಿ ಉಳ್ಳಾಲ ಬ್ಲಾಕ್ ಪ್ರಥಮ ಸ್ಥಾನದಲ್ಲಿದೆ. - ಯು.ಟಿ. ಖಾದರ್, ಸಚಿವ

ಅದಕ್ಕೇ ಇರಬೇಕು, ತಮ್ಮ ಬ್ಲಾಕ್‌ನಲ್ಲಿ ಕ್ರಿಮಿನಲ್‌ಗಳ ಹೆಸರುಗಳು ಕಾಣಿಸಿಕೊಂಡಿರುವುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...