×
Ad

ರಾಷ್ಟ್ರೀಯ ವೈಧ್ಯಕೀಯ ಆಯೋಗ ಜಾರಿಗೆ ಒತ್ತಾಯಿಸಿ ವೈಧ್ಯರ ಮುಷ್ಕರ

Update: 2018-01-02 18:28 IST

ಚಿಕ್ಕಮಗಳೂರು, ಜ. 2: ನೀತಿ ಆಯೋಗದ ಶಿಪಾರಸ್ಸಿನಂತೆ ರಾಷ್ಟ್ರೀಯ ವೈಧ್ಯಕೀಯ ಆಯೋಗವನ್ನು ಜಾರಿಗೆ ತರದಂತೆ ತಡೆಯಲು ಒತ್ತಾಯಿಸಿ ಮಂಗಳವಾರ ಜಿಲ್ಲೆಯ ವಿವಿಧ ಕಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಮುಚ್ಚಿ ವೈಧ್ಯರುಗಳು ಪ್ರತಿಭಟನೆ ನಡೆಸಿದರಲ್ಲದೇ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

1956ರಲ್ಲಿ ಸ್ಥಾಪನೆಯಾ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯನ್ನು ಮುಚ್ಚಿ ನ್ಯಾಷನಲ್ ಕಮೀಷನ್ ಜಾರಿಗೆ ತರುವ ಕಾಯ್ದೆಯನ್ನು ಸದರಿ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಕಾಯ್ದೆ ಜಾರಿಗೆ ಬಂದ ದಿನ ವೈಧ್ಯಕೀಯ ಕ್ಷೇತ್ರದ ಕರಾಳ ದಿನವಾಗಲಿದೆ. ಆದ್ದರಿಂದ ಈ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗಳ ಮೈಧ್ಯರು ಮುಷ್ಕರ ನಡೆಸಿ ಮನವಿ ಸಲ್ಲಿಸಿರು.

 ಕೆಲವರ ತಪ್ಪಿಗೆ ಒಂದು ಇಡೀ ಸಂಸ್ಥೆಯನ್ನೇ ಮುಚ್ಚಲು ಹೊರಟಿರುವುದು ಸರಿಯಲ್ಲ. ಹಾಗೊಂದು ವೇಳೆ ಕೆಲವು ಕಾನೂನಾತ್ಮಕ ಬದಲಾವಣೆಗಳು ವೈಧ್ಯಕೀಯ ಶಿಕ್ಷಣದ ಗುಣಮಟ್ಟದ ಕಾರಣಕ್ಕೆ ಬೇಕಾದರೆ, ಹಾಲಿ ಇರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾಯ್ದೆಗೆ ಅರ್ಹ ತಿದ್ದುಪಡಿಗಳನನು ತರಬಹುದು. ನೆಗಡಿಯಾಯಿತು ಎಂದು ಮೂಗು ಕೊಯ್ದುಕೊಂಡಂತೆ ಮಾಡುವುದು ಸರಿಯಲ್ಲ. ವೈಧ್ಯಕೀಯ ವಿದ್ಯರ್ಥಿಗಳ ಮತ್ತು ವೈಧ್ಯರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

  64 ಸದ್ಸಯರ ಈ ಕಮಿಷನ್‍ನ ವಿವಿಧ ವಿಭಾಗದಲ್ಲಿ ಚುನಾಯಿತ ಸದಸ್ಯರ ಸಂರ್ಖಯೆ ಕೇವಲ 5 ಮಾತ್ರವಿದೆ. ಸರ್ಕಾರ ಕೇಂದ್ರಸ ರಕಾರದ ನಾಮ ನಿರ್ಧೇಶನ ಸದಸ್ಯರು ಮತ್ತು ಅಧಿಕಾರಶಾಹಿ ಇಲ್ಲಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಹಾಕುತ್ತಿರುವ ಕೊಡಲಿಯೇಟಾಗಿದೆ. ಆಡಳಿತ ಪಕ್ಷದ ಮಾತಿಗೆ ತಲೆಯಾಡಿಸುವ ಅಧಿಕಾರಿಗಳನ್ನು ಮತ್ತು ನಾಮನಿರ್ಧೇಶಿತ ಸದಸ್ಯರ ವೈಧ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹಾಳುಗೆಡವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಶೇ.80ರಷ್ಟು ವೈಧ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತತ್ರಿಸುವ ಹಕ್ಕುಗಳನ್ನು ರಾಜ್ಯ ಸರಕಾರ ಉಳಿಸಿಕೊಂಡಿದೆ. ಭವಿಷ್ಯದಲ್ಲಿ ಅದು ಶೇ.40 ವೈಧ್ಯಕೀಯ ಸೀಟಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾದಾಗ ಶೇ.60ರಷ್ಟು ವೈಧ್ಯಕೀಯ ಈಟುಗಳ ಶುಲ್ಕ ನಿಗದಿಯ ಅವಕಾಶವನ್ನು ಖಾಸಗಿ ವೈಧ್ಯಕೀಯ ಕಾಲೇಜುಗಳು ಪಡೆದುಕೊಳ್ಳುತ್ತದೆ. ಇದರಿಂದ ತಮ್ಮ ಮಕ್ಕಳನ್ನು ವೈಧ್ಯರನ್ನಾಗಿ ಮಾಡಬೇಕೆಂಬ ಬಹುತೇಕ ಪೋಷಕರ ಆಸೆಗೆ ಕೊಡಲಿ ಪೆಟ್ಟು ಬೀಳೂತ್ತದೆ. ಆ ಮೂಲಕ ಮಧ್ಯಮ ವರ್ಗದ ವೈಧ್ಯಕೀಯ ಶಿಕ್ಷಣದ ಆಸೆಯನ್ನು ಕೈಬಿಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
  ಈ ವೇಳೆ ವೈಧ್ಯರ ಸಂಘದ ಕಾರ್ಯದರ್ಶಿ ಡಾ. ಶಶಿಧರ್, ಡಾ. ವಿಜಯಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News