ಆಲ್ದೂರು: ಎಸ್‍ಎಸ್‍ಎಫ್ ಮೂಡಿಗೆರೆ ಡಿವಿಜನ್ ಮಟ್ಟದ ಪ್ರತಿಭೋತ್ಸವ

Update: 2018-01-02 13:07 GMT

ಆಲ್ದೂರು, ಜ.2: ಪ್ರತಿಭೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣ ಮಾಡುತ್ತದೆ. ಯುವಪೀಳಿಗೆಗೆ ಇದರಿಂದ ಪ್ರಯೋಜನವಿದೆ ಎಂದು ಜಿಲ್ಲಾ ಪ್ರತಿಭೋತ್ಸವ ಸಮಿತಿ ಅಧ್ಯಕ್ಷ ಸಫ್ವಾನ್ ಸಖಾಫಿ ಹೇಳಿದರು.

ಅವರು ಆಲ್ದೂರು ಮಸೀದಿ ವಠಾದಲ್ಲಿ ಸುನ್ನಿ ಸ್ಟೂಡೆಂಟ್ ಫರಡರೇಶನ್ ಮೂಡಿಗೆರೆ ಡಿವಿಝನ್ ಹಮ್ಮಿಕೊಂಡಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮಕ್ಕಳ ಪ್ರತಿಭೆಯನು ಪೋಷಿಸುವ ಕಾರ್ಯವನ್ನು ಎಸ್‍ಎಸ್‍ಎಫ್ ರಾಜ್ಯ ಸಮಿತಿಯು ವಿವಿಧ ತಾಲೂಕು, ಜಿಲ್ಲೆ ಹಾಗೂ ಡಿವಿಜನ್ ಸಹಿತ ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡು ಬರುತ್ತಿದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಇಲ್ಲಿ ಅನಾವರಣಗೊಳಿಸಿ ಮುಂದುವರಿಯುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಸುಮಾರು 90ರಷ್ಟು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಪ್ರತಿಬೋತ್ಸವದಲ್ಲಿ ಆಲ್ದೂರು ಯೂನಿಟ್ ಚಾಂಪಿಯನ್ ಆಗಿ ಹೊರ ಬಂದಿದೆ. ತೀರ್ಪುಗಾರರಾಗಿ ಎಸ್‍ಎಸ್‍ಎಫ್ ರಾಜ್ಯ ಸಮಿತಿ ಸದಸ್ಯ ಹುಸೈನ್ ಸಅದಿ ಹೊಸ್ಮಾರ್ ಕಾರ್ಯ ನಿರ್ವಹಿಸಿದರು. 

ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಬದ್ರುದ್ದೀನ್ ಧ್ವಜಾರೋಹಣ ಮಾಡಿದರು. ಮೂಡಿಗೆರೆ ಡಿವಿಝನ್ ಎಸ್‍ಎಸ್‍ಎಫ್ ಅಧ್ಯಕ್ಷ ಅಶ್ರಫ್ ಆಲ್ದೂರ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಸಯ್ಯದ್ ಹಾಮಿಂ ತಂಝಳ್ ದುವಾ ಆಶಿರ್ವಾದ ನೆವೇರಿಸಿದರು. ಕಾರ್ಯಕ್ರಮವನ್ನು ಮುಹಮ್ಮದ್ ಅಲಿ ಹನಿಫೀ ಕಿತ್ತಳೆಗಂಡಿ ಉಧ್ಘಾಟಿಸಿದರು.
ಮೂಡಿಗೆರೆ ಕನ್ವೀನರ್ ಇಬ್ರಾಹೀಂ ಮೂಡಿಗೆರೆ, ಸುಲೈಮಾನ್, ಖಾಲೀದ್, ಮುಹಮ್ಮದ್ ಮತ್ತು ಮೂಡಿಗೆರೆ ಡಿವಿಝನ್‍ಗೆ ಸೇರಿದ ಎಲ್ಲಾ ಯೂನಿಟ್‍ಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News