ಕೊಳ್ಳೇಗಾಲ: ಘರ್ಷಣೆ; ಮೂವರಿಗೆ ಗಾಯ
Update: 2018-01-02 18:51 IST
ಕೊಳ್ಳೇಗಾಲ, ಜ.2: ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಮೂವರು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯರಾತ್ರಿ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ತಾಲೂಕಿನ ಮುಳ್ಳೂರು ಗ್ರಾಮದ ಗೌತಮ್(21), ನಂದನ್(23), ರಂಗಸ್ವಾಮಿ(42) ಗಾಯಗೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಆಚರಣೆಯ ವೇಳೆ ಗೌತಮ್ ಹಾಗೂ ಕಾಮರಾಜು ಗುಂಪುಗಳ ನಡುವೆ ಮಾತಿನ ಚಕಾಮುಕಿ ನಡೆದು, ಆನಂತರ ಚಾಕು ಮತ್ತು ಮಚ್ಚಿನಿಂದ ಕಾಮರಾಜು ಹಾಗೂ ಜೊತೆಯಲ್ಲಿದ್ದ ಲೋಕೇಶ್, ಚಿನ್ನಸ್ವಾಮಿ, ಮಹೇಂದ್ರ ಎಂಬವರು ಹಲ್ಲೆ ನಡೆಸಿದ್ದ ಕಾರಣ ಗೌತಮ್, ನಂದನ್ ಹಾಗೂ ರಂಗಸ್ವಾಮಿಯವರಿಗೆ ತಲೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಾಯವಾಗಿದೆ ಎಂದು ವರದಿಯಾಗಿದೆ.