×
Ad

ಮದ್ದೂರು: ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ

Update: 2018-01-02 22:27 IST

ಮದ್ದೂರು, ಜ.2:  ತಾಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗು ಅಧ್ಯಕ್ಷರ ವಿರುದ್ದ ಸ್ಥಳೀಯ ಗ್ರಾಮಸ್ಥರು ದಸಂಸ ಮುಖಂಡರು ಮಂಗಳವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಪಿಡಿಓ ಸಿದ್ದರಾಜು ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಸಿದ್ದರಾಜು ಹೆದ್ದಾರಿ ಅಕ್ಕಪಕ್ಕದಲ್ಲಿ ಹೊಟೇಲ್, ಅಂಗಡಿಗಳ ಪರವಾನಗಿ ನೀಡಲು ಲಂಚ ಪಡೆದು ಲಕ್ಷಾಂತರ ರೂ.ಗಳನ್ನು ಪಂಚಾಯತ್‍ಗೆ ವಂಚಿಸಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರತಿಭಟನೆ ಕೈಬಿಡುವಂತೆ ಗ್ರಾಪಂ ಉಪಾಧ್ಯಕ್ಷ ಗಿರೀಶ್ ಮನವಿ ಮಾಡಿದರೂ ಪ್ರತಿಭಟನಾಕಾರರು ಕಿವಿಗೊಡಲಿಲ್ಲ. ಕೊನೆಗೆ ತಾಪಂ ಇಓ ಕೃಷ್ಣಮೂರ್ತಿ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಪಂ ಸದಸ್ಯ ರಾಜೇಂದ್ರ, ದಸಂಸ ಮುಖಂಡರಾದ ಅಂದಾನಿ ಸೋಮನಹಳ್ಳೀ, ಸುಧೀರ್, ರಾಜೇಶ್, ಶಂಕರ್,  ಸವಿತಾ, ಶೋಭಾ, ಗಿರಿಜಾ, ಜಯಶೀಲ, ರಾಜಮ್ಮ, ಮಂಜುಳಾ, ಶಾರದಮ್ಮ, ಸಾಕಮ್ಮ, ಉಷಾ, ಸುಮಾ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News