×
Ad

ಶಿವಮೊಗ್ಗ: ಹೊಂಡಾ ಆಕ್ಟೀವ ಸ್ಕೂಟರ್ ಕಳವು

Update: 2018-01-03 19:12 IST

ಶಿವಮೊಗ್ಗ, ಜ. 3: ಮನೆಯ ಕಾಂಪೌಂಡ್ ಆವರಣದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಹೊಂಡಾ ಆಕ್ಟೀವ್ ಸ್ಕೂಟರ್‍ನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಅಶೋಕನಗರ ರಸ್ತೆಯ 2 ನೇ ತಿರುವಿನಲ್ಲಿ ನಡೆದಿದೆ.

ನಗರದ ಕಾರ್ ಶೋರೂಂವೊಂದರಲ್ಲಿ ಕಾರ್ಯನಿರ್ವಹಿಸುವ ವೇಣುಗೋಪಾಲ್ ಎಂಬುವರಿಗೆ ಈ ಸ್ಕೂಟರ್ ಸೇರಿದ್ದಾಗಿದೆ. ಇದರ ಮೌಲ್ಯ 49 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ. ಎಂದಿನಂತೆ ಸ್ಕೂಟರ್‍ನ್ನು ಲಾಕ್ ಮಾಡಿ ಮನೆಯ ಕಾಂಪೌಂಡ್ ಆವರಣದಲ್ಲಿ ನಿಲ್ಲಿಸಿದ್ದು, ರಾತ್ರಿ ವೇಳೆ ಕಳ್ಳರು ಸ್ಕೂಟರ್ ಅಪಹರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News