×
Ad

ಮೈಸೂರು ಪೆಯಿಂಟ್ಸ್ ಅ್ಯಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯ ಡಿವಿಡೆಂಡ್ ಮೊತ್ತ ಮುಖ್ಯಮಂತ್ರಿಗಳಿಗೆ ಹಸ್ತಾಂತರ

Update: 2018-01-03 22:39 IST

ಮೈಸೂರು,ಜ.3: ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಪೆಯಿಂಟ್ಸ್ ಅ್ಯಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು 2016-17 ನೇ ಸಾಲಿನಲ್ಲಿ ರೂ 28.46 ಕೋಟಿಗಳಷ್ಟು ವಹಿವಾಟು ನಡೆಸಿ, ರೂ 6.18 ಕೋಟಿ (ತೆರಿಗೆ ಮುಂಚಿನ) ಲಾಭವನ್ನು ಗಳಿಸಿದ್ದು, ಸರ್ಕಾರಕ್ಕೆ ಶೇ.25 ರಷ್ಟು ಡಿವಿಡಂಟ್ ಮೊತ್ತ  23,68,250 ರೂ. ಗಳ ಚೆಕ್‍ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹಸ್ತಾಂತರಿಸಿದರು.
       
ಕಂಪನಿಯು 2016-17 ನೇ ಸಾಲಿಗೆ ತನ್ನ ಎಲ್ಲಾ ಷೇರುದಾರರಿಗೆ ಶೇ 25 ರಷ್ಟು ಡಿವಿಡೆಂಡ್ ಘೋಷಣೆ ಮಾಡಿರುತ್ತದೆ. ಅದರ ಪ್ರಕಾರ ಶೇ.91.39 ರಷ್ಟು ಷೇರು ಬಂಡವಾಳ ಹೊಂದಿರುವ ಸರ್ಕಾರಕ್ಕೆ ಶೇ 25 ರಷ್ಟು ಡಿವಿಡೆಂಡ್ ಮೊತ್ತ ರೂ.23,68,250-00 ಗಳನ್ನು ದಿನಾಂಕ: 02.01.2018 ರಂದು ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಬೃಹತ್, ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಆರ್.ವಿ. ದೇಶಪಾಂಡೆರವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ  ಡಿ.ವಿ. ಪ್ರಸಾದ್ ರವರ ಘನ ಉಪಸ್ಥಿತಿ ಮತ್ತು ಸಮಕ್ಷಮದಲ್ಲಿ, ಕಂಪನಿಯ ಅಧ್ಯಕ್ಷರಾದ ಎಚ್.ಎ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಚಂದ್ರಶೇಖರ ದೊಡ್ಡಮನಿ ರವರು ಹಾಗೂ ಸಿ ಹರಕುಮಾರ್, ಪ್ರಧಾನ ವ್ಯವಸ್ಥಾಪಕರು ನೀಡಿದರು.

ಇದೇ ಸಂದರ್ಭದಲ್ಲಿ ಕಂಪನಿಯ 2016-17 ನೇ ಸಾಲಿನ ವಾರ್ಷಿಕ ವರದಿ, ಪ್ರಗತಿಯ ವಿವರಗಳನ್ನೂ ಕೂಡ ಸಲ್ಲಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News