ಬೀದಿ ನಾಯಿ ಹತ್ಯೆ ಪ್ರಕರಣ: ಮುಖ್ಯಾಧಿಕಾರಿ ವಿರುದ್ದ ಎಫ್ಐಆರ್ ದಾಖಲು
ಸಕಲೇಶಪುರ, ಜ. 3: ಬೀದಿ ನಾಯಿಗಳನ್ನು ಕೊಂದು ಹೂಳಿರುವ ಪ್ರಕರಣಕ್ಕೆ ಸಂಭದಿಸಿದಂತೆ ಪುರಸಭೆಯ ಮುಖ್ಯಾಧಿಕಾರಿ ವಿಲ್ಸನ್ ಹಾಗೂ ನಾಯಿ ಹಿಡಿಯುವ ಗುತ್ತಿಗೆದಾರ ಜಾರ್ಜ್ ರೊರ್ಬಟ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಸಾಕ್ಷಿ ನಾಶಪಡಿಸುವ ಸಾದ್ಯತೆ ಇರುವುದರಿಂದ ಪೋಲಿಸರು ನಾಯಿ ಶವ ಹೂಳಿರುವ ಸ್ಥಳದ ಮಹಜರ್ ನಡೆಸಿ ತನಿಕೆ ಚುರುಕು ಗೊಳಿಸಿದ್ದಾರೆ.
ಬೀದಿನಾಯಿ ಸಮಸ್ಯೆ ಪರಿಹರಿಸುವ ನೆಪದಲ್ಲಿ ಪುರಸಭೆ 1 ಲಕ್ಷ ರೂ ಬಿಲ್ ಮಾಡಿ ಕೆಲವು ನಾಯಿಗಳನ್ನು ಹಿಡಿದು ಕೊಂದು ಸುಭಾಷ್ ಮೈದಾನದ ಸಮೀಪ ಭೂಮಿಯಲ್ಲಿ ಹೂತುಹಾಕಿರುವ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆಬಂದಿದ್ದು, ಪ್ರಾಣಿ ದಯಾ ಸಂಘದ ಅಧಿಕಾರಿ ಹರೀಶ್ ಕೆ ಬಿ ಪೋಲಿಸರಿಗೆ ದೂರು ಸಲ್ಲಿಸಿದ್ದರು.
ಸುಮಾರು 350 ನಾಯಿಗಳನ್ನು ಕೊಂದು ಸುಮಾರು 2 ತಿಂಗಳ ಹಿಂದೆ ಪುರಸಭೆ ಸಿಬ್ಬಂದಿ ಸುಬಾಶ್ ಮೈದಾನದ ಸಮೀಪ ಭೂಮಿಯಲ್ಲಿ ಹೊತಿಹಾಕಿದ್ದಾರೆ ಎಂದು ಹರೀಶ್ ಆರೋಪಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಕೆ ಬಿ, ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾ ವೀರನ ಮಹಾಸ್ತಾಭೀಷೇಕದ ಸಡಗರದ ಸ್ಥಳದ ಸಮೀಪದಲ್ಲಿ ಹಾಗೂ ಸರಕಾರದ ಪಶು ಸಂಗೋಪಾಲನೆಯ ಮಂತ್ರಿಗಳ ತವರೂರಿನಲ್ಲಿ ನಾಯಿಗಳ ಸಾಮೂಹಿಕ ಹತ್ಯೆಯ ಪ್ರಕರಣ ನಡೆದಿರುವುದು ವಿಶಾದದ ಸಂಗತಿಯಾಗಿದೆ ಎಂದರು.
ಬೀದಿ ನಾಯಿ ಸಮಸ್ಯೆ ಪರಿಹಾರಕ್ಕೆ ನಾಯಿಗಳನ್ನು ಕೊಲ್ಲುವುದು ಪರಿಹಾರವಲ್ಲ. ಇತರೆ ವೈಜ್ಞಾನಿಕ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಸಂತಾನೋತ್ಪತ್ತಿ ತಡೆಗಟ್ಟುವುದು ಸರಿಯಾದ ಕ್ರಮ ವಾಗಿದೆ ಎಂದರು
ನಾಯಿಗಳು ಮನುಷ್ಯರನ್ನು ಕಚ್ಚುವುದು ಗಂಬೀರವಾದ ಸಮಸ್ಯೆ, ಈ ಸಮಸ್ಯೆಗೆ ಪುರಸಬೆ ನೇರ ಹೊಣೆಯಾಗಿದೆ. ಹಂತ ಹಂತ ವಾಗಿ ಸಂತಾನ ಹರಣ ಮಾಡುವುದರಿಂದ ನಾಯಿಗಳು ದೈಹಿಕವಾಗಿ ಬಲಹೀನವಾಗುತ್ತವೆ. ನಾಯಿ ಸಂತಾನ ಕಡಿಮೆಯಾಗುತ್ತದೆ. ಈ ಮೂಲಕ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಕೊಲ್ಲುವ ಕ್ರಮ ಅಮಾನವೀಯ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಆದಾಯವಾಗುತ್ತದೆ ಎಂದರು.