ಹನೂರು: ರಸ್ತೆ ಅಪಘಾತ; ಐವರಿಗೆ ಗಾಯ
ಹನೂರು,ಜ.4 : ಸಮೀಪದ ಕುರಟ್ಟಿ ಹೊಸೂರು ಗ್ರಾಮದಿಂದ ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ಆಟೋವೊಂದು ಪಲ್ಟಿ ಹೊಡೆದಿದ್ದು, ವಾಹನ ಚಾಲಕ ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಕೌದಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ.
ಕೌದಳ್ಳಿ ಸಮೀಪದ ಕುರಟ್ಟಿ ಹೊಸೂರು ಗ್ರಾಮದ ಬಸವರಾಜು (35), ನಾಗರಾಜು (25), ಸಿದ್ದರಾಜು (35), ಶೆಟ್ಟಳ್ಳಿ ಗ್ರಾಮದ ವಾಹನ ಚಾಲಕ ಕಾಳಯ್ಯ (45) ಹಾಗೂ ಕೃಷ್ಣಶೆಟ್ಟಿ (70) ಎಂಬವರೇ ಗಾಯಗೊಂಡವರು.
ಜ.5 ರಂದು ಚಿಕ್ಕಲ್ಲೂರಿನಲ್ಲಿ ನಡೆಯುವ ಪಂಕ್ತಿಸೇವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಮಧ್ಯಾಹ್ನ 2.30ರಲ್ಲಿ ಗ್ರಾಮದಿಂದ ಆಟೋದ ಮೂಲಕ ತೆರಳುತ್ತಿದ್ದರು. ಈ ವೇಳೆ ಕೌದಳ್ಳಿ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಮೇಲೆ ಚಾಲಕ ಆಯತಪ್ಪಿ ಆಟೋ ಹತ್ತಿಸಿದ್ದಾನೆ. ಪರಿಣಾಮ ಆಟೋ ಪಲ್ಟಿಯಾಗಿದ್ದು, ಜಖಂಗೊಂಡಿದೆ. ಇದರಿಂದ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳ ಚೀರಾಟ ಶಬ್ದ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸಮೀಪದ ಅಸ್ಪತ್ರೆಯಲ್ಲಿ ದಾಖಲಿಸಿದ್ದಾರೆ