ಕೊಳ್ಳೇಗಾಲ: ವಾಹನ ಢಿಕ್ಕಿ; 7 ಮಂದಿಗೆ ಗಂಭೀರ ಗಾಯ

Update: 2018-01-04 17:33 GMT

ಕೊಳ್ಳೇಗಾಲ,ಜ.4: ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಬಸವೇಶ್ವರ ಅಕ್ಕಿ ಮಿಲ್‍ನ ಬಳಿ ಗುರುವಾರ ಟಾಟಾ ಎಸಿ ಆಟೊಗೆ ರೋಡ್ ರೋಲಾರ್ ಢಿಕ್ಕಿ ಹೊಡೆದು 7 ಮಂದಿಗೆ ಗಂಭೀರ ಗಾಯಾಗಳಾಗಿದೆ.

ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯನ್ನು ಮುಗಿಸಿ ಹಿಂದಿರುಗಿ ಬರುವ ಸಂದರ್ಭದಲ್ಲಿ ಟಾಟಾ ಎಸಿ ಆಟೋ ನಿಂತಿರುವ ರೋಡ್ ರೋಲಾರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ  ಸಿದ್ದಪ್ಪ, ಕಾರ್ತಿಕ್, ಲಕ್ಷೀದೇವಿ, ಚಿಕ್ಕತಾಯಮ್ಮ, ಕುಮಾರ್, ರಾಜು, ಮಂಜು  ಗಾಯಾಗೊಂಡಿದ್ದಾರೆ.

5 ಮಂದಿಯನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸೇರಿಸಲಾಗಿದ್ದು, 2 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News