ಜೆಡಿಎಸ್ ಅಧಿಕಾರಕ್ಕೆ: ಎಚ್.ವಿಶ್ವನಾಥ್ ವಿಶ್ವಾಸ
Update: 2018-01-04 23:19 IST
ಮದ್ದೂರು, ಜ.4: ಕಾಂಗ್ರೆಸ್ ಮತ್ತು ಬಿಜೆಪಿ ಯಾತ್ರೆಗಳಿಂದ ರೋಸಿಹೋಗಿರುವ ಜನರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದರು.
ಗುರುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಜೆಡಿಎಸ್ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ತಾವೇ ಹೈಕಮಾಂಡ್‍ನಂತೆ ವರ್ತಿಸುತ್ತಿದ್ದು, ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ತಮ್ಮ ಹಿತಕ್ಕಾಗಿ ಯಾರನ್ನಾದರೂ ಓಲೈಸುತ್ತಾರೆ, ಕೈಬಿಡುತ್ತಾರೆ ಎಂದು ಅವರು ಟೀಕಿಸಿದರು.