ಲಾರಿ ಹರಿಸಿ ಸಹ ಚಾಲಕನ ಕೊಲೆ
Update: 2018-01-05 21:00 IST
ಮಂಡ್ಯ, ಜ.5: ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಮತ್ತೊಬ್ಬ ಚಾಲಕನ ಮೇಲೆ ಲಾರಿ ಹರಿಸಿ ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಕಿಕ್ಕೇರಿ ಬಳಿ ತೆಂಗಿನಚಿಪ್ಪಿನ ಕಾರ್ಖಾನೆಯಲ್ಲಿ ಚಾಲಕನಾಗಿರುವ ತಮಿಳುನಾಡಿನ ಪೊಲ್ಲಾಚಿಯ ನಾಗನೂರು ಗ್ರಾಮದ ಮುರಳಿ ಎಂಬಾತ ತನ್ನ ಸ್ನೇಹಿತ ಚಾಲಕ ರಾಜನ್(25) ಮೇಲೆ ಲಾರಿ ಹರಿಸಿ ಕೊಲೆಗೈದಿದ್ದಾನೆ.
ಬುಧವಾರ ತಡರಾತ್ರಿ ಕುಡಿಯುತ್ತಿದ್ದಾಗ ಮುರಳಿ ಮತ್ತು ರಾಜನ್ ನಡುವೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ಕುಪಿತಗೊಂಡ ಮುರಳಿ ರಾಜನ್ ಮೇಲೆ ಲಾರಿ ಹರಿಸಿ ಕೊಲೆಗೈದನೆಂದು ತಿಳಿದು ಬಂದಿದೆ.
ಠಾಣೆಗೆ ಬಂದು ಶರಣಾದ ಮುರಳಿಯನ್ನು ಬಂಧಿಸಿ ಸ್ಥಳಕ್ಕೆ ದಾವಿಸಿದ ಸಿಪಿಐ ಎಚ್.ಬಿ.ವೆಂಕಟೇಶಯ್ಯ ಮತ್ತು ಸಿಬ್ಬಂದಿ ರಾಜನ್ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.