×
Ad

ಚಿಟ್ ಫಂಡ್ ಹೆಸರಿನಲ್ಲಿ ಕೋಟ್ಯಾಂತರ ರೂ.ವಂಚನೆ: ವ್ಯಕ್ತಿಯ ಬಂಧನ

Update: 2018-01-05 22:39 IST

ಮೈಸೂರು,ಜ.5: ಚಿಟ್ ಫಂಡ್ ಹೆಸರಿನಲ್ಲಿ  ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಚಿಟ್ ಫಂಡ್ ಮಾಲೀಕನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ.

ಶುಭದ ಚಿಟ್ ಫಂಡ್ ಮಾಲೀಕ ಪ್ರಶಾಂತ್ ಎಂಬಾತನೇ ಬಂಧಿತನಾಗಿದ್ದು, ಈತ ಚಿಟ್ ಫಂಡ್ ಹೆಸರಿನಲ್ಲಿ ಹಲವು ಜನರಿಗೆ ವಂಚಿಸಿ ಪರಾರಿಯಾಗಿದ್ದ. ಸರಸ್ವತಿಪುರಂ ಪೋಲೀಸ್ ಠಾಣೆಯಲ್ಲಿ ಈತನ ವಂಚನೆಯ ಕುರಿತು ದೂರು ದಾಖಲಿಸಿದ್ದರು. ಪೊಲೀಸರು ಪ್ರಶಾಂತ್ ನನ್ನು ಹುಡುಕಾಟ ನಡೆಸಿದ್ದರು. ಕೊನೆಗೂ ಈತ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಸರಸ್ವತಿಪುರಂ ಠಾಣೆಯ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News