×
Ad

ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

Update: 2018-01-05 22:55 IST

ಶಿವಮೊಗ್ಗ, ಜ. 5: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಅಸುನೀಗಿದ ಘಟನೆ ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಜಂಕ್ಷನ್ ಹತ್ತಿರದ ಕಣಗಾಲಸರ ಕ್ರಾಸ್‍ನಲ್ಲಿ ವರದಿಯಾಗಿದೆ. 

ಸಲ್ಮಾನ್ ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ಇವರು ಸ್ಕೂಟರ್‍ನಲ್ಲಿ ಜಂಕ್ಷನ್ ಬಳಿಯ ತೋಟವೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News