ದಾವಣಗೆರೆ: ದೀಪಕ್ ರಾವ್ ಹತ್ಯೆ ಖಂಡಿಸಿ ಪ್ರತಿಭಟನೆ
ದಾವಣಗೆರೆ,ಜ.5: ದೀಪಕ್ ರಾವ್ ಹತ್ಯೆ ಖಂಡಿಸಿ ನಗರದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಆಹಾರ ಸಚಿವ ಯು.ಟಿ. ಖಾದರ್, ರಮಾನಾಥ ರೈ ಅಣಕು ಶವಯಾತ್ರೆ ಮಾಡಿ, ಗಾಂಧಿ ವೃತ್ತದಲ್ಲಿ ಸಿಎಂ ಸೇರಿದಂತೆ ನಾಲ್ವರ ಪ್ರತಿಕೃತಿ ದಹಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದರ ಹಿಂದೆ ಪಿಎಫ್‍ಐ, ಎಸ್‍ಪಿಡಿಐ ಸಂಘಟನೆ ಕೈವಾಡವಿದೆ ಎಂದು ಆರೋಪಿಸಿದರು.
ಇಡೀ ಪ್ರಕರಣವನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ಸೂಕ್ತ ತನಿಖೆಗಾಗಿ ಒಪ್ಪಿಸಬೇಕು. ಮೃತ ದೀಪಕ್ ರಾವ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ದೀಪಕ್ ಹತ್ಯೆ ನೈತಿಕ ಹೊಣೆ ಹೊರಬೇಕಾದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ, ಗೃಹ ಸಚಿವ ರಾಮಲಿಂಗಾರೆಡ್ಡಿ, ಆಹಾರ ಸಚಿವ ಯು.ಟಿ. ಖಾದರ್ ತಕ್ಷಣ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಲಿ. ಹಿಂದು ಮುಖಂಡರು, ಕಾರ್ಯಕರ್ತರ ಮಾರಣ ಹೋಮ ನಡೆದಿದ್ದರೂ ಅಸಡ್ಡೆ ತೋರಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ, ಎನ್.ರಾಜಶೇಖರ, ಬಿ.ರಮೇಶ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ, ವಕೀಲ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಎಚ್.ಎನ್. ಗುರುನಾಥ, ಪಿ.ಎಸ್.ಜಯಣ್ಣ, ನಾಗರತ್ನ ನಾಯ್ಕ, ಸವಿತಾ ರವಿ, ಪ್ರಭು ಕಲ್ಬುರ್ಗಿ, ಶಂಕರಗೌಡ ಬಿರಾದಾರ್, ಶಿವನಗೌಡ ಪಾಟೀಲ, ಡಿ.ಹನುಮಂತಪ್ಪ ಗಾಂಧಿ ನಗರ, ಅಣಜಿ ಗುಡ್ಡೇಶ, ಅಣಬೇರು ಶಿವಪ್ರಕಾಶ, ಕೆ.ಎಂ.ವೀರೇಶ ಪೈಲ್ವಾನ್, ಭಾಗ್ಯ ಪಿಸಾಳೆ, ಅಶೋಕ ನಾಯ್ಕ, ಎಚ್.ಎನ್. ಜಗದೀಶ, ಧನುಷ್ ರೆಡ್ಡಿ, ಬಿ.ಎಸ್. ಚನ್ನವೀರ ಮತ್ತಿತರರಿದ್ದರು.