ಗೂಡ್ಸ್ ಆಟೋ ಢಿಕ್ಕಿ: ಇಬ್ಬರು ಪಾದಚಾರಿಗಳ ಮೃತ್ಯು
Update: 2018-01-06 19:26 IST
ಶಿವಮೊಗ್ಗ, ಜ. 6: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮೂವರು ಮಹಿಳೆಯರಿಗೆ ಗೂಡ್ಸ್ ಆಟೋ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಓರ್ವರ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಅರಮನೆ ತೋಟದ ಬಳಿ ನಡೆದಿದೆ.
ಕಲ್ಲಸುರುಳಿ ಗ್ರಾಮದ ನಿವಾಸಿ ಅನಸೂಯ (40) ಮತ್ತು ಏಳುಗೋಡು ಗ್ರಾಮದ ಶಾಂತ (50) ಮೃತಪಟ್ಟವರೆಂದು ಗುರುತಿಸಲಾಗಿದೆ. ಕಮಲಾಕ್ಷಿ ಎಂಬುವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.