ಕೊಳ್ಳೇಗಾಲ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಯಿಂದ ಚಾಲನೆ
ಕೊಳ್ಳೇಗಾಲ,ಜ.6: ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 173 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆಂದು ಸಂಸದ ಆರ್.ಧೃವನಾರಾಯಣ್ ಅವರು ಹೇಳಿದರು.
ಮುಖ್ಯಮಂತ್ರಿಗಳ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ಎಂಜಿಎಸ್‍ವಿ ಮೈದಾನದಲ್ಲಿ ಸಿದ್ದತೆಗೊಳುತ್ತಿರುವ ವೇದಿಕೆಯ ಪರೀಶಿಲನೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೇ ತಿಂಗಳು 10 ರಂದು ಚಾ.ನಗರ ತಾಲೂಕಿನ ನಾಗವಲ್ಲಿಯ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ನಂತರ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿ ಸುಮಾರು 173 ಕೋಟಿ ವೆಚ್ಚದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾಮಗಾರಿಗೆ ಚಾಲನೆ ನಿಡಲಿದ್ದಾರೆ. ನಂತರ ಹನೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವರಿ ಸಚಿವೆ ಗೀತಾಮಹದೇವಪ್ರಸಾದ್, ಶಾಸಕ ಎಸ್.ಜಯಣ್ಣ, ಜಿಲ್ಲಾಧಿಕಾರಿ ಬಿ.ರಾಮು, ಎಸ್‍ಪಿ ಧರ್ಮೇಂದ್ರಕುಮಾರ್, ಎಎಸ್‍ಪಿ ಗೀತಾ, ಎಇ ರಮೇಶ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮರಿಸ್ವಾಮಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಯೋಗೇಶ್, ಸದಸ್ಯ ಸದಾಶಿವಮೂರ್ತಿ, ನಗರಸಭೆ ಅಧ್ಯಕ್ಷ ಶಾಂತರಾಜು, ಕಿನಕನಹಳ್ಳಿ ರಾಜಯ್ಯ, ಕರ್ನಾಟಕ ಪ್ರಧಾನ ಪ್ರದೇಶ ಸಮಿತಿ ಎಸ್.ಸಿ ಘಟಕ ರಾಜ್ಯ ಸಂಚಾಲಕ ಡಿ.ಎನ್. ನಂಟರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು ಹಾಗೂ ಮತ್ತಿತರರಿದ್ದರು.