ಗಾಂಜಾ ಸಾಗಾಟ: ನಾಲ್ವರು ವಿದ್ಯಾರ್ಥಿಗಳ ಬಂಧನ
Update: 2018-01-06 22:51 IST
ಶಿವಮೊಗ್ಗ, ಜ.6: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ವರದಿಯಾಗಿದೆ.
ಎನ್.ಟಿ.ರಸ್ತೆಯ ನಿವಾಸಿ ಡಿಪ್ಲೊಮಾ ಮೆಕಾನಿಕಲ್ ವಿದ್ಯಾರ್ಥಿ ಮುಸ್ತಫಾ(20), ಅಣ್ಣಾನಗರದ ನಿವಾಸಿ ಬಿಕಾಂ ವಿದ್ಯಾರ್ಥಿ ಮುಹಮ್ಮದ್ ರಿಯಾಬ್ (20), ಆಝಾದ್ ನಗರದ ನಿವಾಸಿ ಪಿಯುಸಿ ಅಭ್ಯಾಸ ಮಾಡಿರುವ ಅರ್ಫಾ (18) ಹಾಗೂ ಆರ್‌ಎಂಎಲ್ ನಗರದ ನಿವಾಸಿ ಬಿಕಾಂಕ ವಿದ್ಯಾರ್ಥಿ ಮುಹಮ್ಮದ್ ಯಾಸೀನ್(21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರಿಂದ 300 ಗ್ರಾಂ ಗಾಂಜಾ, ರೆನಾಲ್ಟ್ ಡಸ್ಟರ್ ಕಾರು, 1,550 ರೂ.ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು 15 ದಿವಸಗಳ ಕಾಲ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ